Header Ads
Header Ads
Breaking News

ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂಡುಬಿದಿರೆ: ಕೋಟೆಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನರಲ್ ಮುಖ್ಯ ಶಿಕ್ಷಕ ಸುಧಾಕರ ಸಾಲ್ಯಾನ್ ಅವರನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಶಾಲಾ ಎಸ್‌ಡಿಎಂಸಿ ನೇತೃತ್ವದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಶಿಕ್ಷಣಾಧಿಕಾರಿ ಕಚೇರಿಯಿಂದ ಮೂಡುಬಿದಿರೆ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಜಾಥ ನಡೆಸಿದರು. ಸುಧಾಕರ ಸಾಲ್ಯಾನ್ ಅವರಿಗೆ ವರ್ಗಾವಣೆ ವಿನಾಯಿತಿ ಇದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯವರು ವರ್ಗಾವಣೆಯಲ್ಲಿ ವಿನಾಯಿತಿ ನೀಡದೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಸರ್ಕಾರದ ಆಜ್ಞೆಯನ್ನು ಪಾಲನೆ ಮಾಡಿಲ್ಲ. ಇದರಿಂದ ಶಾಲೆಗೆ ಅನ್ಯಾಯವಾಗಿದೆ ಎಂದು ದೂರು ಪತ್ರವನ್ನು ತಹಸೀಲ್ದಾರ್ ಕಚೇರಿಗೆ ಎಸ್‌ಡಿಎಂಸಿ ಅಧ್ಯಕ್ಷೆ ಸುಮನಾ ಸಲ್ಲಿಸಿದರು. 60 ಮಕ್ಕಳಿಗಿಂತ ಕಡಿಮೆಯಿರುವ ಶಾಕೆಗಳ ಮುಖ್ಯ ಶಿಕ್ಷಕರ ಹುದ್ದೆಯನ್ನು ಇಲಾಖೆ ತೆಗೆದಿದ್ದಯ, ಆ ಪ್ರಕಾರ ಮೂಡುಬಿದಿರೆ ವಲಯದ ಪುತ್ತಿಗೆ, ಕುಂಗೂರು, ಕೋಟೆಬಾಗಿಲು ಶಾಲೆಗಳ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಂಡಿದ್ದಾರೆ. ಡಿಡಿಪಿಐ ಅವರ ಆದೇಶವನ್ನು ಯಥಾವತ್ತಾಗಿ ಪಾಲಿಸಿದ್ದೇನೆ. ತರಗತಿಗೆ ಹಾಜರಾದ ಮಕ್ಕಳನ್ನು ಸಮವಸ್ತ್ರ ಸಹಿತ ಕಳುಹಿಸುವ ಮೂಲಕ ಮುಖ್ಯ ಶಿಕ್ಷಕರು ನಿಯಮ ಉಲ್ಲಂಘಿಸಿದ್ದು, ಅವರಿಗೆ ನೋಟೀಸ್ ನೀಡಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ತಿಳಿಸಿದ್ದಾರೆ.

Related posts

Leave a Reply