Header Ads
Header Ads
Header Ads
Breaking News

ಮುಚ್ಚುವ ಭೀತಿಯಲ್ಲಿ ಸುಜ್ಲಾನ್.. ಮತ್ತೆ ನೂರಮೂವತ್ತು ಮಂದಿ ಕಾರ್ಮಿಕರು ಮನೆಗೆ..

ಕಳೆದ ಸುಮಾರು ಎಂಟು ತಿಂಗಳ ಹಿಂದೆ ಏಕಾ‌ಏಕಿ 700  ಮಂದಿ ಕಾರ್ಮಿಕರನ್ನು ಬೀದಿಗೆ ತಳ್ಳಿದ ಸುಜ್ಲಾನ್ ಕಂಪನಿ, ಇದೀಗ ನಾವು ದಿವಾಳಿಯಾಗುತ್ತಿದ್ದೇವೆ ಎಂಬ ಮಾತನ್ನು ಮಾದ್ಯಮದ ಮುಂದೆ ದೃಢಪಡಿಸಿ, ಮತ್ತೆ ನೂರಮೂವತ್ತು ಮಂದಿ ಕಾರ್ಮಿಕರಿಗೆ ಗೇಟ್‌ಪಾಸ್ ನೀಡಿದೆ.

ಬರೀಗೈಯಲ್ಲಿ ಕಾರ್ಮಿಕರನ್ನು ಕಂಪನಿಯಿಂದ ಹೂರ ಹಾಕುವ ಪ್ಲಾನ್ ನಡೆಯುತ್ತಿದಂತೆ ಜಾಗೃತರಾದ ಕಾರ್ಮಿಕರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಇವರ ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆ ಸಹಿತ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದರಿಂದ ಪ್ರತಿಭಟನೆ ತೀವೃ ಸ್ವರೂಪ ಪಡೆಯಿತು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಗಾರ ಸುಜ್ಲಾನ್ ಕಾರ್ಮಿಕ ಹೃತೇಶ್, ಸುಮಾರು ಎಂಟು ತಿಂಗಳ ಹಿಂದೆ ಕಂಪನಿ 700 ಮಂದಿ ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಿದ ಸಂದರ್ಭ ನಾವು ನಡೆಸುತ್ತಿದ್ದ ಹೋರಾಟಕ್ಕೆ ಅಬ್ಬರದ ಪ್ರವೇಶ ನೀಡಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮತ್ತೆ ಇತ್ತ ಮುಖ ತೋರಿಸಲೂ ಬಂದಿಲ್ಲ. ಕಾರಣ ಕಂಪನಿಯ ಪ್ರಮುಖ ದಕ್ಷಿಣ ಮೂರ್ತಿ ಹಾಗೂ ಸೊರಕೆ ಮಧ್ಯೆ ಸೂಟ್‌ಕೇಸ್ ವ್ಯವಹಾರ ನಡೆದಿದೆ ಎಂಬುದಾಗಿ ನೇರವಾಗಿ ಆರೋಪಿಸಿದ್ದಾರೆ.

ಇಂದು ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಎ‌ಎಸ್ಪಿ ಹೃಷಿಕೇಶ್ ಸೊನಾವತಿ, ಪ್ರತಿಭಟನಾಗಾರರ ಡಿಮ್ಯಾಂಡ್ ಮೇರೆಗೆ ಗುತ್ತಿಗೆ ಕಂಪನಿಗಳಾದ ಎಸ್.ಎಸ್.ಡಿ.ಎಲ್ ಹಾಗೂ ಯುನಿಟೇಕ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಕ್ಟೋಬರ್ ತಿಂಗಳ ವೇತನ ಸಹಿತ ಮುಂದಿನ ಒಂದುವರೆ ತಿಂಗಳ ಸಂಬಳ ಹಾಗೂ ಬೋನಸ್ ಹಣವನ್ನು ಮುಂದಿನ ಹದಿನೈದು ದಿನದೋಳಗೆ ನೀಡುವ ಭರವಸೆಯ ಮೇರೆಗೆ ನೂರಮೂವತ್ತು ಮಂದಿ ಕಾರ್ಮಿಕರು ಕಂಪನಿಗೆ ವಿದಾಯ ಹೇಳಿದ್ದಾರೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply