Header Ads
Header Ads
Breaking News

ಮುಡಿಪು ಜಂಕ್ಷನ್‍ನಲ್ಲಿರುವ ಗೋಳಿಕಟ್ಟೆ ಕೆಡಹುವ ಪ್ರಯತ್ನಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ಗ್ರಾ.ಪಂ. ಸಭೆಯಲ್ಲಿ ಟಿ.ಜಿ. ರಾಜಾರಾಮಭಟ್ ಆಗ್ರಹ

ಮುಡಿಪು ಜಂಕ್ಷನ್‍ನಲ್ಲಿರುವ ಗೋಳಿಕಟ್ಟೆ ಅತ್ಯಂತ ಪ್ರಮುಖವಾದ ತಾಣ ಜಂಕ್ಷನ್ ಅಭಿವೃದ್ಧಿ ಹೆಸರಿನಲ್ಲಿ ಗೋಳಿಕಟ್ಟೆಯನ್ನು ಕೆಡಹುವ ಪ್ರಯತ್ನಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಗೋಳಿಕಟ್ಟೆಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಹಿರಿಯರಾದ ಟಿ.ಜಿ. ರಾಜಾರಾಮಭಟ್ ಎಚ್ಚರಿಸಿದ್ದಾರೆ.

ಮುಡಿಪು ಆಡಿಟೋರಿಯಂನಲ್ಲಿ ನಡೆದ ಕುರ್ನಾಡು ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ಮುಡಿಪುವಿನಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಮದ ಸಾಗುತ್ತಿದೆ. ಇದೀಗ ಮುಡಿಪು ಜಂಕ್ಷನ್ ಸುಸಜ್ಜಿತವಾಗಿ ನಿರ್ಮಾಣಕ್ಕೆ ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಂಕ್ಷನ್ ಅಭಿವೃದ್ಧಿ ಸಂದರ್ಭದಲ್ಲಿ ಜಂಕ್ಷನ್ನ ಮುಖ್ಯ ಭಾಗವಾಗಿರುವ ಗೋಳಿಕಟ್ಟೆಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಯೋಜನೆ ರೂಪಿಸಿ ಒಂದು ವೇಳೆ ಗೋಳಿಕಟ್ಟೆಗೆ ಕೊಡಲಿ ಏಟು ಹಾಕಿದರೆ ಅಪ್ಪಿಕೋ ಚಳವಳಿಯನ್ನು ಮಾಡಲಾಗುವುದು ಎಂದರು.
ಮುಡಿಪುವಿನಲ್ಲಿ ರಸ್ತೆ ಚತುಷ್ಪಥ ಸೇರಿದಂತೆ ಜಂಕ್ಷನ್ ಅಭಿವೃದ್ದಿಗೆ ಇನ್ಫೋಸಿಸ್ ಸುಮಾರು 27 ಕೋಟಿರೂ ಫೌಂಡೇಷನ್ ಮೂಲಕ ಸರಕಾರಕ್ಕೆ ನೀಡಿದ್ದು, ಈ ಕಾರ್ಯವನ್ನು ಶ್ಲಾಘಿಸುವುದರೊಂದಿಗೆ ಕುರ್ನಾಡು ಗ್ರಾಮಸ್ಥರ ಪರವಾಗಿ ಶ್ಲಾಘಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಿ ಎಂದು ಟಿ.ಜಿ.ರಾಜಾರಾಮ ಭಟ್ ತಿಳಿಸಿದರು.

ಸಭೆಯ ನೋಡೆಲ್ ಅಧಿಕಾರಿಯಾಗಿ ಅಕ್ಷರ ದಾಸೂಹ ಸಹಾಯಕ ನಿರ್ದೇಶಕ ನೋಣಯ್ಯ ನಾಯಕ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ ಕುರ್ನಾಡು, ಸದಸ್ಯರಾದ ಗೋಪಾಲ ಬಂಗೇರ ಮೊದಲಾದವರು ಉಪಸ್ಥಿತಿದ್ದರು.

Related posts

Leave a Reply

Your email address will not be published. Required fields are marked *