Header Ads
Header Ads
Breaking News

ಮುಡಿಪು :ಮಾದರಿ ಜಂಕ್ಷನ್ ಆಗಿ ಅಭಿವೃದ್ಧಿಗೊಳಿಸಲು ಯೋಜನೆ-ಯು.ಟಿ. ಖಾದರ್ ಹೇಳಿಕೆ

ಇನ್ಪೋಸಿಸ್ ಸೇರಿದಂತೆ ಕೈಗಾರಿಕಾ ವಲಯವನ್ನು ಸಂಪರ್ಕಿಸುವ ಮುಡಿಪು ಜಂಕ್ಷನ್ ಮಾದರಿ ಜಂಕ್ಷನ್ ಆಗಿ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಮುಡಿಪು ಸಾಂಬಾರ್ ತೋಟದಿಂದ ಮುಡಿಪು ಕಾಯರ್ ಗೋಳಿವರೆಗೆ ಇನ್ಫೋಸಿಸ್ ನ ವತಿಯಿಂದ ಏಳೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲ ತಾಲೂಕು ಆಗಿ ಘೋಷಣೆಯಾದ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರ ಅವಬಿವೃದ್ದಿಗೆ ಇನ್ನಷ್ಟು ಚಾಲನೆ ದೊರಕಿದ್ದು, ಈಗಾಗಲೇ ದೇರಳಕಟ್ಟೆಯಿಂದ ತೊಕ್ಕೊಟ್ಟುವರೆಗೆ ೩೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ದ್ವಿಪಥ ಕಾಮಗಾರಿ ಅಭಿವೃದ್ದಿಯಲ್ಲಿದೆ.

ಸೋಮೇಶ್ವರ ಮಾಡೂರು ರಸ್ತೆಯಾಗಿ ಮೆಲ್ಕಾರ್ ಸಂಪರ್ಕಿಸುವ ಲಿಂಕ್ ರಸ್ತೆ ಹೆದ್ದಾರಿ ಕಾಮಗಾರಿಯಡಿ ನಡೆಯಲಿದ್ದು, ಈ ರಸ್ತೆಯನ್ನು ಹೊರತುಪಡಿಸಿ ಉಳಿದ ಮುಖ್ಯರಸ್ತೆಗಳನ್ನು ಮೇಲ್ದರ್ಜೆಗೆ ರಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿಇನ್ ಫೋಸಿಸ್ ಹಾಗೂ ಲೋಕೋಪಯೋಗಿ ಇಲಾಖೆ ಜಂಟಿ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *