Header Ads
Header Ads
Header Ads
Breaking News

ಮುನ್ನೂರು ಸ್ವಚ್ಛತಾ ಅಭಿಯಾನ ಗ್ರಾ.ಪಂ ಅಧ್ಯಕ್ಷೆ ರೂಪಾ.ಡಿ.ಶೆಟ್ಟಿ ಚಾಲನೆ 10 ತಿಂಗಳು ಮನೆ ಮನೆಯಲ್ಲಿ ಸ್ವಚ್ಛತಾ ಜಾಗೃತಿ

ಉಳ್ಳಾಲ; ಮುಂದಿನ ಹತ್ತು ತಿಂಗಳುಗಳ ಕಾಲ ತಿಂಗಳಿಗೊಂದು ಕಾರ್ಯಕ್ರಮದ ಮೂಲಕ ಮನೆ ಮನೆಯಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ  ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಶ್ರೀ ಏಕಗವ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಮುನ್ನೂರು ಪರಿಕಲ್ಪನೆಯ ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ ‘ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿದರು.

ಮೂರು ವರ್ಷಗಳಿಂದ ನಡೆಸುತ್ತಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಸಾರ್ವಜನಿಕರ ಅಭೂತಪೂರ್ವ ಬೆಂಬಲ ದೊರೆತಿದೆ. ಇನ್ನು 10 ತಿಂಗಳುಗಳಲ್ಲಿ ಎಲ್ಲಾ ಗ್ರಾಮವನ್ನು ಸ್ವಚ್ಛವಾಗಿರಿಸುವ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಗ್ರಾಮಸ್ಥರು ಸಹಕರಿಸಿ ಸಾರ್ವಜನಿಕ ರಸ್ತೆಯನ್ನು ಪ್ರಮುಖವಾಗಿ ಸ್ವಚ್ಛವಾಗಿರಿಸುವಂತೆ ನಿಗಾ ವಹಿಸಬೇಕಿದೆ. ಮನೆ ಮನೆಯಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯ ಮುಂದಿನ 10 ತಿಂಗಳುಗಳಲ್ಲಿ ನಡೆಯಲಿದೆ ಎಂದರು.

ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪಾ ಟಿ.ಶೆಟ್ಟಿ ಚಾಲನೆ ನೀಡಿದರು. ಈ ವೇಳೆ ರಾ.ಸ್ವ.ಸೇ. ಸಂಘದ ಪ್ರಾಂತ ಸಹ ಸಂಪರ್ಕ ಪ್ರಮುಖರಾದ ಪಿ.ಯಸ್.ಪ್ರಕಾಶ್ ಬಿಜೆಪಿ ರಾಜ್ಯಕಾರ್‍ಯಕಾರಿಣಿ ಮಂಡಳಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಹರೀಶ್ ಕುಮಾರ್, ತಾ.ಪಂ ಸದಸ್ಯರಾದ ವಿಲ್ಮಾ ಡಿಸೋಜ, ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಬಂಡಾರಬೈಲು ಹಾಗೂ ಸದಸ್ಯರು, ಗ್ರಾಮಸ್ಥರು ಭಾಗಿಯಾಗಿದ್ದರು.

Related posts

Leave a Reply