Header Ads
Header Ads
Breaking News

ಮುಲ್ಕಿಯಲ್ಲಿ ಅಯ್ಯಪ್ಪ ಗುಡಿಗೆ ನುಗ್ಗಿದ ಕಳ್ಳರು:ಸಮೀಪದಲ್ಲೇ ಪತ್ತೆಯಾದ ವಿಗ್ರಹ

ಅಯ್ಯಪ್ಪ ಗುಡಿಗೆ ಕಳ್ಳರು ನುಗ್ಗಿ ಪಂಚಲೋಹದ ವಿಗ್ರಹ ಕಳವುಗೈದ ಘಟನೆ ಮೂಲ್ಕಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಮೂಲ್ಕಿ ಬಸ್ ನಿಲ್ದಾಣ ಸಮೀಪದಲ್ಲಿ ಅಯ್ಯಪ್ಪ ಸ್ವಾಮೀ ಮಂದಿರ ಮತ್ತು ಸಮೀಪದಲ್ಲಿನ ಪುತ್ರನ್ ಮೂಲಸ್ಥಾನದ ನಾಗಬನಕ್ಕೆ ಕಳ್ಳರು ನುಗ್ಗಿ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪಂಚಲೋಹದ ಮೂರು ವಿಗ್ರಹಗಳು ಮತ್ತು ದೇವಸ್ಥಾನದ ಮತ್ತು ನಾಗಬನದ ಕಾಣಿಕೆ ಡಬ್ಬಿಯಿಂದ ನಗದು ಕಳವುಗೈದಿದ್ದಾರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದ ಬಾಗಿಲ ಬೀಗವನ್ನು ಮುರಿದಿದ್ದು, ಪುತ್ರನ್ ಮೂಲಸ್ಥಾನದ ಕಟ್ಟಡದ ಎರಡು ಕೋಣೆಗಳಿಗೆ ನುಗ್ಗಿ ಕಪಾಟುಗಳಲ್ಲಿ ಹುಡುಕಾಡಿದ್ದಾರೆ, ಸ್ಥಳಕ್ಕೆ ಮೂಲ್ಕಿ ಪೊಲೀಸರು, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಅಲ್ಲದೆ ಮೂಲ್ಕಿ ಪೊಲೀಸರು ಮತ್ತು ಸ್ಥಳೀಯರು ಸುತ್ತಮುತ್ತ ಹುಡುಕಾಡಿದ್ದು ಸಮೀಪದಲ್ಲೇ ಮೂರು ಪಂಚ ಲೋಹದ ವಿಗ್ರಹಗಳು ಪತ್ತೆಯಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply