Header Ads
Breaking News

ಮುಲ್ಕಿಯ ಹಳೆಯಂಗಡಿಯಲ್ಲಿ ಸರಣಿ ಕಳ್ಳತನ

 ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕದಿಕೆಯಲ್ಲಿ ಮೂರು ದೈವಸ್ಥಾನ ಮತ್ತು ಎರಡು ಮನೆಗಳಿಗೆ ಕಳ್ಳರು ನುಗ್ಗಿ ನಗ ನಗದು ಕಳವುಗೈದ ಘಟನೆ ನಡೆದಿದೆ. ಕದಿಕೆಯ ಸುವರ್ಣ ಮೂಲಸ್ಥಾನ, ಸಾಲ್ಯಾನ್ ಮೂಲಸ್ಥಾನ, ಮೋಹನ್ ಸಾಲ್ಯಾನ್ ಅವರ ದೈವಸ್ಥಾನ, ಮನೆ ಮತ್ತು ಅಬುಸಾಲಿಯವರ ಮನೆಗೆ ನುಗ್ಗಿದ್ದಾರೆ. ಸುವರ್ಣ ಮೂಲಸ್ಥಾನದ ದೈವದ ಬೆಳ್ಳಿ ಕಡ್ಸಲೆ, ಬಂಗಾರದ ಕರಿಮಣಿ ಸರ, ಸಾಲ್ಯಾನ್ ಮೂಲಸ್ಥಾನದ ಬೆಳ್ಳಿಕಡ್ಸಲೆ ಬೆಳ್ಳಿಯ ಮೂರ್ತಿ, ಕಾಣಿಕೆ ಎರಡು ಕಾಣಿಕೆ ಹುಂಡಿಯಲ್ಲಿದ್ದ ಹಣ, ಸಮೀಪದ ಮೋಹನ್ ಸಾಲ್ಯಾನ್ ಅವರ ದೈವಸ್ಥಾನದ ದೈವದ ಬೆಳ್ಳಿಯ ಮೂರ್ತಿ ಕಳವುಗೈದಿದ್ದಾರೆ. ಅಬುಸಾಲಿ ಅವರ ಮನೆಗೆ ನುಗ್ಗಿ ಮನೆಯ ಕಪಾಟು ಒಡೆದು ಕಪಾಟಿನಲ್ಲಿದ್ದ ೩೦ ಸಾವಿರ ರೂಪಾಯಿ ನಗದು ಮತ್ತು ಮೋಹನ್ ಸಾಲ್ಯಾನ್ ಅವರ ಮನೆಗೆ ನುಗ್ಗಿದ್ದಾರೆ, ಸಾಲ್ಯಾನ್, ಸುವರ್ಣ ಮತ್ತು ಅಮೀನ್ ಮೂಲಸ್ಥಾನಗಳಲ್ಲಿನ ಬೀಗ ಹಾಕಿದ್ದ ಸುಮಾರು ೧೦ ಕಾಣಿಕೆ ಹುಂಡಿಯನ್ನೇ ಹೊತ್ತೊಯ್ದು ಸಮೀಪದಲ್ಲಿನ ಸಿಗಡಿ ಸಾಕಣಿಕೆಯ ಸ್ಥಳದಲ್ಲಿ ಹುಂಡಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ಮೂಲ್ಕಿ ಪೋಲಿಸರು ಕಳ್ಳತನ ನಡೆದ ಸ್ಥಳಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ, ಸಿಗಡಿ ಸಾಕಣಿಕೆಯ ಸ್ಥಳದ ಸಮೀಪದಲ್ಲಿ ಇಬ್ಬರು ಗೊಣಿ ಚೀಲಕ್ಕೆ ಹಣ ತುಂಬಿಸಿ ದ್ವಿಚಕ್ರವಾಹನದಲ್ಲಿ ಹೋಗುದನ್ನು ಸ್ಥಳೀಯರು ಕಂಡಿದ್ದಾರೆ ಕೂಡಲೇ ಸಾಲ್ಯಾನ್ ಮೂಲಸ್ಥಾನದಲ್ಲಿ ಪರಿಶೀಲನೆ ನಡೆಸುತ್ತಿದ್ದ ಪೋಲಿಸರಿಗೆ ಮಾಹಿತಿ ನೀಡಿ ಸ್ಥಳೀಯರು ಮತ್ತು ಮುಲ್ಕಿ ಪೊಲಿಸರು ಹುಡುಕುವ ಪ್ರಯತ್ನ ಮಾಡಿದ್ದಾರೆ, ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಇಬ್ಬರು ಯುವಕರು ಸಿಗಡಿ ಸಾಕಣಿಕೆಯಲ್ಲಿ ಹೋಗಿ ೬ ಕಿಲೋ ಸಿಗಡಿಯನ್ನು ಖರೀದಿಸಿ ನಂತರ ಗೋಣಿಯಲ್ಲಿ ಸಿಗಡಿಯನ್ನು ತುಂಬಿಸಿ, ಮತ್ತೊಂದು ಖಾಲಿ ಗೋಣಿ ಚೀಲವನ್ನು ಪಡೆದಿದ್ದಾರೆ, ಇದೇ ಯುವಕರು ಕಾಣಿಕೆ ಡಬ್ಬಿಯನ್ನು ಕದ್ದೊಯ್ದು ಯಾರಿಗೂ ಸಂಶಯ ಬರದ ರೀತಿಯಲ್ಲಿ ಖಾಲಿ ಗೋಣಿ ಚೀಲದಲ್ಲಿ ಹಣವನ್ನು ತುಂಬಿಸಿ ಸಿಗಡಿ ಮೀನಿನ ಗೋಣಿ ಚೀಲದೊಟ್ಟಿಗೆ ತೆಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಮೀಪದ ಬಾರ್ ಒಂದರ ಸಿ.ಸಿ ಟಿವಿಯನ್ನು ಪರಿಶೀಲಿಸಲಾಗುತ್ತಿದ್ದು ಸ್ಥಳಕ್ಕೆ ಮೂಲ್ಕಿ ಪೋಲಿಸರು ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಆಗಮಿಸಿದ್ದಾರೆ.

Related posts

Leave a Reply

Your email address will not be published. Required fields are marked *