Header Ads
Breaking News

ಮುಲ್ಕಿ ಪುತ್ರನ್ ಮೂಲಸ್ಥಾನದ ಶಿಲಾಮಯ ನೂತನ ಸಾನಿಧ್ಯದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಮೂಲ್ಕಿಯ ಪುತ್ರನ್ ಮೂಲಸ್ಥಾನದ ಶಿಲಾಮಯ ನೂತನ ಸಾನಿಧ್ಯದಲ್ಲಿ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪುನಃಪ್ರತಿಷ್ಠೆ, ಪಂಚ ಶತ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ನಾಗ ಸಂದರ್ಶನ ಸೇವೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಿ, ಮನೆತನ ಮತ್ತು ಕುಟುಂಬದ ದೈವ, ದೇವರ ಸಾನ್ನಿಧ್ಯ ವೃದ್ಧಿಯಾದಾಗ ದೇವರು ಸಂತುಷ್ಟಗೊಳ್ಳುವುದಲ್ಲದೇ ಸತ್ಕಾರ್ಯದಲ್ಲಿ ಶ್ರಮಿಸಿದವರ ಸರ್ವ ಸಂಕಲ್ಪಗಳು ಕೂಡಾ ಈಡೇರುತ್ತದೆ ಎಂದು ಹೇಳಿದ್ರು. ಬಳಿಕ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳಿಗೆ ಸ್ವಾಮೀಜಿಯವರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಇನ್ನು ಸಂಜೆ ನಾಗ ತನು ತರ್ಪಣಾ ಪ್ರಸನ್ನ ಪೂಜೆ ಹಾಗೂ ವಿವಿಧಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಒಟ್ಟಿನಲ್ಲಿ ಊರ ಪರವೂರ, ದಾನಿಗಳ ಹಾಗೂ ಸಂಘಟನೆಗಳ ಸಹಾಕಾರದಿಂದ ಬ್ರಹ್ಮಕಲಶೋತ್ಸವವು ಬಹಳ ವಿಜ್ರಂಭಣೆಯಿಂದ ನಡೆಯಿತು.

Related posts

Leave a Reply

Your email address will not be published. Required fields are marked *