Header Ads
Header Ads
Breaking News

ಮುಳಿಹುಲ್ಲಿಗೆ ಆಕಸ್ಮಿಕ ಬೆಂಕಿ ಸುಮಾರು ಐವತ್ತು ಸಾವಿರ ರೂ. ನಷ್ಟ ಕೊಣಾಜೆಯ ತೌಡುಗೋಳಿಯಲ್ಲಿ ನಡೆದ ಘಟನೆ

ಜನವಸತಿ ಪ್ರದೇಶದಲ್ಲಿ ಮುಳಿಹುಲ್ಲಿಗೆ ಆಕಸ್ಮಾತ್ ಬೆಂಕಿ ತಗುಲಿದ ಪರಿಣಾಮ ಪರಿಸರವಾಸಿಗಳು ಆತಂಕಕ್ಕೆ ಗುರಿ ಯಾಗಿದ್ದಲ್ಲದೆ, ಸಾವಿರಾರು ರೂ. ಮೌಲ್ಯದ ಮರ ಸುಟ್ಟು ಕರಕಲಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ ಸಮೀಪದ ಶಾಂತಿಪಳಿಕೆಯಲ್ಲಿ ಮಂಗಳವಾರ ನಡೆದಿದೆ.

ತೌಡುಗೋಳಿ ಹಾಗೂ ಶಾಂತಿಪಳಿಕೆ ರಸ್ತೆಯ ಗುಡ್ಡಕ್ಕೆ ಆಕಸ್ಮಾತ್ ಬೆಂಕಿ ತಗುಲಿದ್ದು ಬೈಕ್ ಸವಾರನೊಬ್ಬ ಗಮನಿಸಿ ಸ್ಥಳೀಯರಾದ ಹರೀಶ್ ಕನ್ನಿಗುಳಿ ಅವರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳೀಯ ನಿವಾಸಿಗಳು ಹಾಗೂ ಪರಿಸರದ ಸುಮಾರು ಐವತ್ತಕ್ಕೂ ಹೆಚ್ಚು ಯುವಕರನ್ನು ಸೇರಿಸಿಕೊಂಡು ಬೆಂಕಿ ಬೆಂಕಿ ನಂದಿಸಲು ಮುಂದಾದರು. ಹಾಗೆಯೇ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಅಗ್ನಿಶಾಮಕ ದಳ ತರಿಸಲಾಯಿತು. ಅಗ್ನಿಶಾಮಕ ದಳ ಮಂಗಳೂರಿನಿಂದ ತೌಡುಗೋಳಿ ತಲುಪಲು ಸುಮಾರು ನಲ್ವತ್ತು ನಿಮಿಷ ತಗುಲಿತಾದರೂ ಸಿಬ್ಬಂದಿಗಳು ಬೆಂಕಿ ಇನ್ನಷ್ಟು ಪಸರಿಸುವುದನ್ನು ತಡೆಗಟ್ಟಿದರು. ಗುಡ್ಡಕ್ಕೆ ಅಂಟಿಕೊಂಡಂತೆ ಸುಮಾರು ಇಪ್ಪತ್ತು ಮನೆಗಳು, ದೇವಸ್ಥಾನವಿದ್ದು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಸುಮಾರು ನೂರಕ್ಕೂ ಮಿಕ್ಕ ಯುವಕರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ವರದಿ: ಅರೀಪ್ ಉಳ್ಳಾಲ