Header Ads
Breaking News

ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷದ ಫೋಟೋ ಬಿಡುಗಡೆ: ಅಪಘಾತಕ್ಕೆ ಕಾರಣವೇನು ಗೊತ್ತೇ?

ಕಾರವಾರ: ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದ್ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಸೇನೆಯು ಬಿಡುಗಡೆಗೊಳಿಸಿದೆ.

ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್‌ನ ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ ೧೬ ರಂದು ಮುಳುಗಡೆಯಾಗಿ ನಾಪತ್ತೆಯಾಗಿತ್ತು. ನಾಲ್ಕು ತಿಂಗಳ ಹುಡುಕಾಟದ ನಂತರ ಕೆಲ ದಿನಗಳ ಹಿಂದಷ್ಟೇ ಬೋಟಿನ ಅವಶೇಷಗಳು ನೌಕಾಸೇನೆ ಮಲ್ಪೆಯ ಮೀನುಗಾರರೊಂದಿಗೆ ತೆರಳಿ ಪತ್ತೆ ಹಚ್ಚಿತ್ತು. ಉಡುಪಿಯ ಮಲ್ಪೆ ಬಂದರಿನಿಂದ ಹೊರಟಿದ್ದ ಬೋಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ೫, ಉಡುಪಿಯ ಇಬ್ಬರು ಸೇರಿ ೭ ಮಂದಿ ಮೀನುಗಾರಿಕೆಗೆ ತೆರಳಿದ್ದು, ಎಲ್ಲರೂ ಬೋಟ್ ನಲ್ಲಿ ಜಲಸಮಾಧಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ನೌಕಾದಳದವರು ಮಾಹಿತಿಯನ್ನು ಹೊರಹಾಕಬೇಕಿದೆ.

Related posts

Leave a Reply

Your email address will not be published. Required fields are marked *