Header Ads
Header Ads
Breaking News

ಮುಸಲ್ಮಾನರು ಕಲಿಯುಗದ ರಾಕ್ಷಸರು: ಉಡುಪಿಯಲ್ಲಿ ರಾಘವಲು ಪ್ರಚೋದನಕಾರಿ ಭಾಷಣ

ಮುಸಲ್ಮಾನರು ಜಾತ್ಯಾತೀತರು ಕಲಿಯುಗದ ರಾಕ್ಷಸರು ಎಂದು ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವಲು ಉಡುಪಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ. ಉಡುಪಿಯಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಪ್ರತೀ ಯುಗದಲ್ಲೂ ರಾಕ್ಷಸರ ವಧೆಗೆ ದೇವರು ಅವತಾರವೆತ್ತಿದರು. ಕಲಿಯುಗದ ರಾಕ್ಷಸರು ಸಂಸತ್ ಮೇಲೆ ಕೋರ್ಟ್ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಮುಸಲ್ಮಾನರಿಗೆ ಪ್ರಗತಿಪರರು ಬೆಂಬಲ ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಆದ್ರೆ ಸಮಾಜ ಒಗ್ಗೂಡುತ್ತದೆ ಎಂಬ ಭಯ ಅವರಿಗೆ ಇದೆ. ದೇಶದಲ್ಲಿ 33 ಸಾವಿರ ಮಂದಿರ ಈವರೆಗೆ ನಾಶವಾಗಿದೆ ಎಂದ್ರು, ಇನ್ನು ಸಂಸದೆ ಶೋಭಾಗೆ ಎಚ್ಚರಿಕೆ ನೀಡಿದ ರಾಘವಲು, ಸಂಸತ್ತಿನಲ್ಲಿ ಜನಾಗ್ರಹ ಸಭೆಯ ಮನವಿ ಕೊಟ್ಟು ನಮ್ಮ ಅಭಿಪ್ರಾಯ ಸಲ್ಲಿಸದಿದ್ದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂದ್ರು. ಇನ್ನು ಅರ್ಧಕುಂಭಮೇಳದಲ್ಲಿ ಸಂತರು ಹಲವು ಘೋಷಣೆಗಳನ್ನು ಮಾಡಲಿದ್ದಾರೆ. ಜನವರಿಯ ಸಂತರ ಘೋಷಣೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Related posts

Leave a Reply