Header Ads
Header Ads
Breaking News

ಮುಸುಕಿನ ಗುದ್ದಾಟಕ್ಕೆ ತೆರೆ: ಕುಂದಾಪುರ ತಾ.ಪಂ. ಅಧ್ಯಕ್ಷೆಯಾಗಿ ಶ್ಯಾಮಲಾ ಕುಂದರ್, ಉಪಾಧ್ಯಕ್ಷರಾಗಿ ರಾಮ್‌ಕಿಶನ್ ಹೆಗ್ಡೆ ಆಯ್ಕೆ

ಕುಂದಾಪುರ: ವೈಯಕ್ತಿಕ ಕಾರಣಗಳಿಂದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ರಾಜೀನಾಮೆ ಬಳಿಕ ತೆರವಾಗಿದ್ದ ಸ್ಥಾನಕ್ಕೆ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.

ಕಿರಿಮಂಜೇಶ್ವರ ತಾಪಂ ಕ್ಷೇತ್ರ ಬಿಜೆಪಿಯಿಂದ ಆಯ್ಕೆಯಾದ ಶ್ಯಾಮಲಾ ಕುಂದಾರ್ ಅಧ್ಯಕ್ಷೆಯಾಗಿ, ಬಸ್ರೂರು ತಾಪಂ ಕ್ಷೇತ್ರದ ಬಿಜೆಪಿ ಪ್ರತಿನಿಧಿ ಬಿ.ಎ. ರಾಮಕಿಶನ್ ಹೆಗ್ಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕೆ ಬಿಜೆಪಿಯ ಇಬ್ಬರು ಸದಸ್ಯರುಗಲಾದ ಮಾಲಿನಿ. ಕೆ ಹಾಗೂ ಶ್ಯಾಮಲಾ ಕುಂದರ್ ನಾಮಪತ್ರ ಸಲ್ಲಿಸಿದ್ದರು. ಭಾರಿ ಕುತೂಹಲ ಕೆರಳಿಸಿದ್ದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕೊನೆಗೂ  ಮುಖಂಡರು ಸದಸ್ಯರ ಮನವೊಲಿಸುವ ಮೂಲಕ ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತಾಲೂಕು ಪಂಚಾಯಿತಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬೈಂದೂರು ತಾಪಂ ಕ್ಷೇತ್ರದ ಮಾಲಿನಿ ಕೆ. ಹಾಗೂ ಶ್ಯಾಮಲಾ ಕುಂದರ್ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ರಾಮಕಿಶನ್ ಹೆಗ್ಡೆ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿ ಸ್ಥಳೀಯ ಮುಖಂಡರು ಮನ ಒಲಿಸುವ ಮೂಲಕ ಮಾಲಿನಿ ಕೆ.ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

ಕುಂದಾಪುರ ಎಸಿ ಟಿ.ಭೂಬಾಲನ್ ಚುನಾವಣಾ ಅಧಿಕಾರಿಯಾಗಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಕುಂದಾಪುರ ತಾಪಂ ಇಒ ಕಿರಣ್ ಫೆಡ್ನೇಕರ್ ಚುನವಾಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply