Header Ads
Header Ads
Header Ads
Breaking News

ಮುಸುಕುಧಾರಿ ತಂಡದಿಂದ ಇಬ್ಬರ ಮೇಲೆ ತಲವಾರು ದಾಳಿ ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಬಳಿ ಘಟನೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು ಹತ್ಯೆ ಮಾಡಿದ ಆರೋಪಿಗಳ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೈಕಿನಲ್ಲಿ ಬಂದ ಐವರ ತಂಡ ತಲವಾರು ದಾಳಿ ನಡೆಸಿ ವ್ಯಕ್ತಿಯೋರ್ವರ ಹತ್ಯೆ ನಡೆಸಿ, ಇನ್ನೋ ರ್ವನ ಮೇಲೆ ದಾಳಿಗೈದು ಪರಾರಿಯಾದ ಘಟನೆ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಗೇಟಿನ ಎದುರುಗಡೆ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ. ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಜುಬೈರ್ (39) ಹತ್ಯೆಯಾದವರು. ಇವರ ಜತೆಗಿದ್ದ ಮಾರ್ಗತಲೆ ನಿವಾಸಿ ಇಲ್ಯಾಸ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಸಂಜೆ ಮುಕ್ಕಚ್ಚೇರಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರ ಬರುತ್ತಿದ್ದಂತೆ ಬೈಕಿನಲ್ಲಿ ಬಂದ ಐದು ಮಂದಿ ಆಗಂತುಕರು ತಲವಾರಿನಿಂದ ಜುಬೈರ್ ಅವರ ತಲೆಯ ಭಾಗಕ್ಕೆ ಕಡಿದಿ ದ್ದಾರೆ. ಇದನ್ನು ಇಲ್ಯಾಸ್ ಅವರು ತಡೆ ಯಲು ಬಂದಾಗ ಅವರ ಕೈ ಮತ್ತು ಕಾಲಿನ ಭಾಗಕ್ಕೆ ಆಗಂತುಕರು ಕಡಿದು, ಎರಡು ಬೈಕುಗಳಲ್ಲಿ ಪರಾರಿಯಾಗಿದ್ದಾರೆ. ಉಳ್ಳಾ ಲದ ಫಿಶ್‌ಮಿಲ್‌ನಲ್ಲಿ ಇಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜುಬೈರ್ ಅವರು ವಿವಾಹಿತರಾಗಿದ್ದು, ನಾಲ್ವರು ಶಾಲೆ ಕಲಿಯುವ ಮಕ್ಕಳಿದ್ದಾರೆ. ಹತ್ಯೆಗೀಡಾದ ಜುಬೈರ್ ಈವರೆಗೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಎಸ್.ಐ ರಾಜೇಂದ್ರ ಭೇಟಿ ನೀಡಿ ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಜುಬೈರ್ ಎಲ್ಲಿದ್ದಾನೆ ಎಂದು ನಿನ್ನೆ ಸಂಜೆ ವೇಳೆ ಸ್ಥಳೀಯರೊಬ್ಬರಲ್ಲಿ ಸುಹೈಲ್ ಕೇಳಿದ್ದ. ಆದರೆ ಅವರಿಗೆ ಮಾಹಿತಿ ಇಲ್ಲದ್ದರಿಂದ ಪ್ರತಿಕ್ರಿಯಿಸರಿರಲಿಲ್ಲ. ಇದೇ ವೇಳೆ ಜುಬೈರ್ ಮೇಲೆ ಸಂಚು ನಡದಿದೆ ಅನ್ನುವುದು ಆ ವ್ಯಕ್ತಿಗೆ ತಿಳಿದು, ಅವರು ಕೂಡಲೇ ಜುಬೈರ್ ಅವರಿಗೆ ಕರೆ ಮಾಡಿದರೂ, ಮೊಬೈಲ್ ನಾಟ್ ರೀಚೆಬಲ್ ಆಗಿತ್ತು. ಮತ್ತೆ ಅವರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಸಹೋದರನೂ ತಡಮಾಡದೆ ಅಣ್ಣ ಜುಬೈರನಿಗೆ ಕರೆ ಮಾಡಿದರೂ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಕೂಡಲೇ ತಾಯಿಯ ಗಮನಕ್ಕೆ ತಂದಿದ್ದು, ವಿಷಯ ಜುಬೈರ್ ನಿಗೆ ಮುಟ್ಟಿಸುವಂತೆ ತಿಳಿಸಿದ್ದರು. 4 ಗಂಟೆಯ ವೇಳೆಗೆ ತಿಳಿಸಿದ್ದರೂ ಜುಬೈರ್ ಮಾತ್ರ ಕೆಲಸದಿಂದ ನೇರವಾಗಿ ಮಸೀದಿಗೆ ತೆರಳಿದ್ದರಿಂದಾಗಿ ದುಷ್ಕರ್ಮಿಗಳು ತಲವಾರು ದಾಳಿ ನಡಸುವ ಮೂಲಕ ಹತ್ಯೆ ನಡೆಸಿಯೇ ಬಿಟ್ಟಿದ್ದಾರೆ.

ದಿನನಿತ್ಯ ಉಳ್ಳಾಲದಲ್ಲಿರುವ ಹೊಸಪಲ್ಲಿಗೆ ತೆರಳಿ ಜುಬೈರ್ ನಮಾಝ್ ನೆರವೇರಿಸುತ್ತಿದ್ದರು. ಆದರೆ ನಿನ್ನೆ ಸಂಜೆ ಜುಬೈರ್ ಏಕಾ‌ಏಕಿ ಮುಕ್ಕಚ್ಚೇರಿ ಮಸೀದಿಗೆ ತೆರಳಲು ಕಾರಣವಾದರೂ ಏನು? ಅಲ್ಲದೆ ಅವರನ್ನು ಅಲ್ಲಿಗೆ ಕರೆತಂದವರು ದುಷ್ಕರ್ಮಿಗಳ ಜತೆಗೆ ಕೈಜೋಡಿಸಿರುವ ಸಾಧ್ಯತೆಗಳಿವೆ ಅನ್ನುವ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.ಎರಡು ವರ್ಷಗಳ ಹಿಂದೆ ಜುಬೈರ್ ಜತೆಗಿದ್ದ ದಾವುದ್ ಎಂಬವರ ಮೇಲೆ ನಟೋರಿಯಸ್ ರೌಡಿ ಅಲ್ತಾಫ್ ಮತ್ತು ಸುಹೈಲ್ ಎಂಬಾತನ ತಂಡ ಹಲ್ಲೆ ನಡೆಸಿತ್ತು. ಈ ಕುರಿತ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿದೆ. ಪ್ರಕರಣ ಹಿಂಪಡೆಯುವಂತೆ ಅಲ್ತಾಫ್ ಆಗಾಗ್ಗೆ ಜುಬೈರ್ ಅವರಿಗೆ ಬೆದರಿಕೆಯೊಡ್ಡುತ್ತಿದ್ದ. ವರ್ಷದ ಹಿಂದೆ ಗೂಂಡಾ ಕಾಯ್ದೆಯಡಿ ಬಂಧಿತನಾದ ಅಲ್ತಾಫ್ ಜೈಲಿನಲ್ಲಿದ್ದರೂ, ಸಹಚರರ ಮೂಲಕ ಜುಬೈರ್ ಬಳಿ ಪ್ರಕರಣ ಹಿಂಪಡೆಯುವಂತೆ ಬೆದರಿಕೆಯನ್ನು ನಿರಂತರವಾಗಿ ಹಾಕುತ್ತಲೇ ಬಂದಿದ್ದರು. ಆದರೆ ಜಬ್ಬಾರ್ ಇದಕ್ಕೆ ಸೊಪ್ಪುಹಾಕಿರಲಿಲ್ಲ. ಇದೇ ದ್ವೇಷಕ್ಕೆ ಸಂಬಂಧಿಸಿ ಹತ್ಯೆ ನಡೆದಿರುವ ಶಂಕೆ ಇದೆ.

Related posts

Leave a Reply