Header Ads
Header Ads
Breaking News

ಮುಸ್ಲಿಂ ಯೂತ್ ಲೀಗ್ ಯುವಜನ ಯಾತ್ರೆಗೆ ಚಾಲನೆ

ಮಂಜೇಶ್ವರ: ಕೇಂದ್ರದ ಅಧಿಕಾರದ ಚುಕ್ಕಾಣಿಯಲ್ಲಿರುವ ಮೋದಿ ಹಾಗೂ ಅಮಿತ್ ಷಾ ಜೋತೆಯಾಗಿಕೊಂಡು ದಲಿತರನ್ನು ಹಾಗೂ ಮುಸಲ್ಮಾರನ್ನು ಕಗ್ಗೊಲೆಗೈದು ಮಾನ ಹರಾಜು ಮಾಡಿಕೊಂಡು ಭಾರತದ ಸ್ವಾತಂತ್ರ್ಯವನ್ನು ಇಲ್ಲದಂತೆ ಮಾಡಲು ಯತ್ನಿಸುತಿದ್ದಾರೆಂಬುದಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದರು.

ಅವರು ಮಂಜೇಶ್ವರಕ್ಕೆ ಸಮೀಪದ ಉದ್ಯಾವರದಿಂದ ಶನಿವಾರ ಸಂಜೆ ಆರಂಭಗೊಂಡ ಮುಸ್ಲಿಂ ಯೂತ್ ಲೀಗಿನ ಯುವಜನ ಯಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿ ನಮ್ಮ ಭಾರತವನ್ನು ರಕ್ಷಿಸಬೇಕಾಗಿದೆ ಹೊರತು ಕೇಂದ್ರ ಸರಕಾರದ ಜನವಿರೋಧಿ ನೀತಿಗೆ ನಮ್ಮ ಜನತೆ ಭವಿಷ್ಯತ್ತಿನಲ್ಲೂ ಬೆಂಬಲವನ್ನೂ ನೀಡುತ್ತೀರಾ ಎಂದು ಅವರು ಪ್ರಶ್ನಿಸಿದರು. ಭಾರತಕ್ಕೆ ಶಾಂತಿಯ ಇತಿಹಾಸವಿದೆ. ಅದನ್ನು ಮಹಾತ್ಮ ಗಾಂಧೀಜಿ ನಮಗೆ ಒದಗಿಸಿದ್ದಾರೆ. ಇದನ್ನು ಇಲ್ಲದಂತೆ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿ ಸರಕಾರವನ್ನು ನಾವು ಕೇಂದ್ರದಿಂದ ಕೆಳಗಿಳಿಸಬೇಕಾಗಿದೆ, ಯೂತ್ ಲೀಗ್ ನಡೆಸುವ ಈ ಯಾತ್ರೆಗೆ ಕರ್ನಾಟಕ ಕಾಂಗ್ರೆಸ್ಸಿನ ಸಂಪೂರ್ಣ ಬೆಂಬಲವಿರುವುದಾಗಿ ಘೋಷಿಸಿದರು. ಕೋಮುವಾದ ರಹಿತ ಭಾರತ, ಹಿಂಸೆ ರಹಿತ ಕೇರಳ ಎಂಬ ಘೋಷವಾಕ್ಯದಡಿ ಆರಂಭಗೊಂಡ ಯಾತ್ರೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ ಯೂತ್ ಲೀಗ್ ರಾಜ್ಯಾಧ್ಯಕ್ಷ ಮುನವ್ವರ್ ಅಲಿ ತಂಘಲ್ ಗೆ ಧ್ವಜವನ್ನು ಹಸ್ತಾಂತರಿಸಿ ಚಾಲನೆ ನೀಡಿದರು.

ಈ ಸಂದರ್ಭ ನೇತರರಾದ ಪಿ ಕೆ ಕುಂಞಾಲಿ ಕುಟ್ಟಿ, ಮೊಹಮ್ಮದ್ ಬಶೀರ್, ಪಿ ವಿ ಅಬ್ದುಲ್ ವಹಾಬ್, ಅಬ್ದುಲ್ ಸಮದ್ ಸಮದಾನಿ, ಪಿ ಕೆ ಫಿರೋಝ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ನೇತಾರರು ಸೇರಿದಂತೆ ಸಹಸ್ರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.

Related posts

Leave a Reply