Header Ads
Breaking News

ಮುಸ್ಲೀಂ ವೆಲ್‍ಫೇರ್ ಎಸೋಸಿಯೇಶನ್‍ನಿಂದ ರಕ್ತದಾನ ಶಿಬಿರ

ದೇಶದಲ್ಲಿ ವರ್ಷಕ್ಕೆ ಐದು ಕೋಟಿ ಯುನಿಟ್‍ನಷ್ಟು ರಕ್ತದ ಅವಶ್ಯಕತೆ ಇದ್ದು ಸುಮಾರು 3 ಕೋಟಿ ಯುನಿಟ್ ರಕ್ತ ಮಾತ್ರ ಪೂರೈಕೆಯಾಗುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅದ್ಯಕ್ಷರಾದ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ.

ಮುಸ್ಲೀಂ ವೆಲ್ ಫೇರ್ ಅಸೋಸಿಯೇಶನ್ ಮತ್ತು ಬ್ಲಡ್ ಬ್ಯಾಂಕ್ ಕೆ.ಎಂ.ಸಿ ಮಣಿಪಾಲ ಇದರ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಬ್ಲಡ್‍ಬ್ಯಾಂಕ್ ಸ್ಥಾಪನೆ ಹಾಗೂ ಜನಜಾಗೃತಿಯ ಕಾರಣ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಜನ ಮುಂದೆ ಬರುತ್ತಿದ್ದಾರೆ. ಆದರೂ ಸಹ ಇನ್ನೂ ಹೆಚ್ಚಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ನಡೆಯಬೇಕು ಎಂದು ಮುಸ್ಲೀಂ ವೆಲ್‍ಫೇರ್ ಅಸೋಸಿಯೇಶನ್ ಹಮ್ಮಿಕೊಂಡ ಶಿಬಿರಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬ್ಲಡ್ ಬ್ಯಾಂಕ್ ಮಣಿಪಾಲದ ಡಾ. ಪ್ರತೀಕಾ, ಮಸ್ಸಿದ್ ಎ- ಮಣಿಪಾಲ ಇದರ ಅದ್ಯಕ್ಷ ಹಾಜಿ.ಕೆ ಅಬ್ಧುಲ್ಲಾ, ಜಾಮೀಯಾ ಮಸೀದಿಯ ಅದ್ಯಕ್ಷ ಜನಾಬ್ ಸಯ್ಯದ್ ಯಾಸೀನ್ ಉಪಸ್ಥಿತರಿದ್ದರು. ನೂರಕ್ಕೂ ಅಧಿಕ ಮುಸ್ಲೀಂ ಬಾಂಧವರು ರಕ್ತದಾನ ಮಾಡಿದರು.

Related posts

Leave a Reply

Your email address will not be published. Required fields are marked *