Header Ads
Header Ads
Breaking News

ಮೂಡಂಬೈಲು ಸರ್ಕಾರಿ ಶಾಲೆಗೆ ಮಲಯಾಳಂ ಅಧ್ಯಾಪಕರ ನೇಮಕಾತಿ : ತರಗತಿ ಬಹಿಷ್ಕರಿಸಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ಮಂಜೇಶ್ವರ : ಕಳೆದ ವರ್ಷವಷ್ಟೇ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳ ಭಾಷಿಕ ಶಿಕ್ಷಕರನ್ನು ನೇಮಿಸಿ ಭಾರೀ ವಿರೋಧ ಕಟ್ಟಿಕೊಂಡ ಕೇರಳ ಸರಕಾರ ಮತ್ತೆ ಅದೇ ರೀತಿ ಮುಂದುವರಿಸಿದೆ. ಇದರ ವಿರುದ್ಧ ವಿದ್ಯಾರ್ಥಿ ಹಾಗು ಪೋಷಕರುಗಳ ಜೊತೆಯಾಗಿ ಹಾಗೂ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. 

ಮೀಂಜ ಪಂಚಾಯತಿನ ಮೂಡಂಬೈಲು ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮಕ್ಕೆ ಕನ್ನಡದ ಗಂಧಗಾಳಿ ಗೊತ್ತಿಲ್ಲದ ತಿರುವನಂತಪುರ ಮೂಲದ ಮಲೆಯಾಳಿ ಅಧ್ಯಾಪಕರೋರ್ವನ್ನು ನೇಮಕಾತಿ ಮಾಡಲಾಗಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಇಂದು ಬೆಳಗ್ಗಿನಿಂದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡ ಗೊತ್ತಿಲ್ಲದ ಅಧ್ಯಾಪಕರನ್ನು ಕನ್ನಡ ವಿಷಯಗಳಿಗೆ ನೇಮಕ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಸಿದೆ.

Related posts

Leave a Reply

Your email address will not be published. Required fields are marked *