Header Ads
Header Ads
Breaking News

ಮೂಡಬಿದರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

ಮೂಡುಬಿದಿರೆ : ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿ ಗೆಲ್ಲುತೆ ಎಂದು ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮಾಡುವ ಮೂಲಕ ಅದರ ಲಾಭವನ್ನು ಪಡೆಯುತ್ತಿತ್ತು ಆದರೆ ಮುಂದಿನ ಚುನಾವಣೆಯಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿಗೆ ಗೆಲವು ಎಂಬ ಬಗ್ಗೆ ನಮ್ಮ ಕಾರ್ಯಕರ್ತರು ಮತದಾರರಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹೇಳಿದರು.

ಅವರು ಜೆಡಿಎಸ್ ಕಛೇರಿಯ ಆವರಣದಲ್ಲಿ ನಡೆದ ಜಾತ್ಯಾತೀತ ಜನತಾದಳದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ಮೂಡುಬಿದಿರೆಗೆ ಬೇಕಾಗಿದ್ದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು, ವಿವಿಧ ಯೋಜನೆ ಮತ್ತು ಕಛೇರಿಗಳನ್ನು ಬರುವಂತೆ ಮಾಡಿದ್ದೇನೆ ಆದರೆ ಜನರು ತನ್ನ ಅಭಿವೃದ್ಧಿ ಕಾರ್ಯಗಳನ್ನು ನೆನಪಿಟ್ಟುಕೊಂಡಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರಾ ಮಾತನಾಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಉತ್ತಮ ಯೋಜನೆಗಳ ಬಗ್ಗೆ ಮತ್ತು ಅಮರನಾಥ ಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮತ್ತು ಅಧಿಕಾರ ಇಲ್ಲದಿದ್ದಾಗ ಮಾಡುತ್ತಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವಂತಹ ಕೆಲಸಗಳಲ್ಲಿ ನಮ್ಮ ಕಾರ್ಯಕರ್ತರು ಹಿಂದೆ ಬಿದ್ದಿದರಿಂದಾಗಿ ಸೋಲುಗಳು ಕಾರಣವಾಗಿದೆ. ಈ ಚುನಾವಣೆಯಲ್ಲಿ ನಾವು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ೪೦,೦೦೦ದಷ್ಟು ಮತಗಳನ್ನು ಗಳಿಸುವ ಮೂಲಕ ನಿರ್ಣಾಯಕ ಹಂತದಲ್ಲಿ ನಿಲ್ಲಬೇಕಾಗಿದೆ  ಎಂದರು
ಬಹುಜನ ಸಮಾಜವಾದಿ ಪಾರ್ಟಿಯ ಅಚ್ಯುತ ಸಂಪಿಗೆ ಮಾತನಾಡಿದರು. ಜೆಡಿಎಸ್‌ನ ರಾಜ್ಯ ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ, ಪಕ್ಷದ ಮುಖಂಡರಾದ ಹನೀಫ್ ಆಲಂಗಾರು, ಫೆಡ್ರಿಕ್ ಪಿಂಟೋ, ಜೀವನ್ ಶೆಟ್ಟಿ, ಸವಿತಾ, ಹರಿಪ್ರಸಾದ್ ಶೆಟ್ಟಿ, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.