Header Ads
Header Ads
Breaking News

ಮೂಡಬಿದರೆಯಲ್ಲಿ 22 ನೇ ಸಿಪಿ‌ಐ‌ಎಂ ರಾಜ್ಯ ಸಮ್ಮೇಳನ ಜನವರಿ 2 ರಿಂದ 5 ರ ವರೆಗೆ ರ್‍ಯಾಲಿ ಮತ್ತು ಬಹಿರಂಗ ಸಭೆ ಸಮ್ಮೇಳನದ ಕಾರ್ಯಾಧ್ಯಕ್ಷ ವಸಂತ ಅಚಾರಿ ಹೇಳಿಕೆ

 

ಸಿಪಿ‌ಐ‌ಎಂ ಪಕ್ಷದ 22ನೇ ರಾಜ್ಯ ಸಮ್ಮೇಳನ ಜ 2 ರಿಂದ5ರ ವರೆಗೆ ಮೂಡುಬಿದಿರೆಯಲ್ಲಿ ನಡೆಯಲಿದೆ. ಜ 2 ರಂದು ರ್‍ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಕಾರ್‍ಯಾಧ್ಯಕ್ಷ ವಸಂತ ಆಚಾರಿ ತಿಳಸಿದ್ದಾರೆ.

ಅವರು ಮೂಡುಬಿದಿರೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಜ. 2 ರಂದು ಬೆಳಿಗ್ಗೆ 10 ಗಂಟೆಗೆ ಅಲಂಗಾರ್‌ನಿಂದ ಸ್ವರಾಜ್ಯ ಮೈದಾನದವರೆಗೆ ರ್‍ಯಾಲಿ ನಡೆಯಲಿದೆ. ಬಳಿಕ ಬಹಿರಂಗ ಸಭೆ ನಡೆಯಲಿದೆ. ಪಕ್ಷದ ಪ್ರಧಾನ ಕಾರ್‍ಯದರ್ಶಿ ಸೀತಾರಾಮ ಯೆಚೂರಿ, ಪಕ್ಷದ ರಾಜ್ಯ ಸಮಿತಿಯ ಕಾರ್‍ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ, ಹಾಗೂ ಸಿ‌ಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಮತ್ತಿತರರು ಮಾತನಾಡಲಿದ್ದಾರೆ. ಸಮ್ಮೇಳನದಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಸಮಿತಿಯ ಕೋಶಾಧಿಕಾರಿ ಜೆ. ಬಾಲಕೃಷ್ಣ ಶೆಟ್ಟಿ, ಕಾರ್‍ಯದರ್ಶಿ ಯಾದವ ಶೆಟ್ಟಿ, ಪುರಸಭಾ ಸದಸ್ಯೆ ರಮಣಿ ಉಪಸ್ಥಿತರಿದ್ದರು.