Header Ads
Header Ads
Breaking News

ಮೂಡಬಿದರೆಯ ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು

ಮೂಡುಬಿದಿರೆಯ ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವದ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಅಧ್ಯಕ್ಷತೆಯನ್ನು ವಹಿಸಿದರು.ಕಾರ್ಯಕ್ರ ಮದಲ್ಲಿ ಅಲಂಗಾರಿನ ಪಂಡಿತ್ ಹೆಲ್ತ್ ರೆಸೊರ್ಟ್ ನ ಪ್ರಮೋಟರ್ ಲಾಲ್ ಗೋಯಲ್ ಮತ್ತು ಅವರ ಪತ್ನಿಯಾದ ಶ್ರೀಮತಿ ರಜನಿ ಲಾಲ್ ಗೋಯಲ್ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು

 

ಲಾಲ್ ಗೋಯಲ್ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವವನ್ನು ರೂಪಿಸಿ ಯಶಸ್ವಿ ವಿದ್ಯಾರ್ಥಿ ಗಳಾಗಿ ಎ೦ದು ಕಿವಿಮಾತು ಹೇಳಿದರು. ಕಾರ್ಯಕ್ರ ಮದಲ್ಲಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಬಾಹುಬಲಿ ಪ್ರ ಸಾದ್ ರವರು ಭಾಗವಹಿಸಿ ವಿದ್ಯಾರ್ಥಿ ಜೀವನದ ಮಹತ್ವದ ಬಗ್ಗೆ ತಿಳಿಸಿದರು. ಅ ದ್ಯಕ್ಷತೆ ವಹಿಸಿದ ಪರಮ ಪೂಜ್ಯ. ಸ್ವಾಮೀಜಿಯವರು ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗಿ ಶಿಸ್ತು ಸ೦ಯಮ ದ ಜೀವನ ಶಿಕ್ಷಣಾಲಾಯ ದ ನಿಯಮಗಳ ಪಾಲನೆಯನ್ನು ಪಾಲಿಸಿ ಅದಶ೯ ವಿದ್ಯಾರ್ಥಿ ಗಳಾಗಿ ಎಂದು ನುಡಿ ದರು. ಕಾರ್ಯಕ್ರ ಮದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಜೆನ್ ಮಠ ಮೂಡುಬಿದಿರೆ ಯ ದವಲತ್ರಯ ಜೆನ್‌ಕಾಶಿ ಟ್ರಸ್ಟ್ ವತಿಯಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಉಪನ್ಯಾಸಕರಾದ ನಮಿರಾಜ್ ರವರು ನಿರೂಪಣೆ ಮಾಡಿದರು .ಪ್ರಾಂಶುಪಾಲರಾದ ಸೌಮ್ಯ ಶ್ರೀ ರವರು ಸ್ವಾಗತವನ್ನು ನೀಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply