Header Ads
Header Ads
Breaking News

ಮೂಡಬಿದರೆಯ ಹೊಸ್ಮಾರಿನಲ್ಲಿ ವನಮಹೋತ್ಸವ, ವಿದ್ಯಾರ್ಥಿಗಳಿಂದ ಬೀಜದುಂಡೆ ಅಭಿಯಾನ


ನೀರಿಗಾಗಿ ಅರಣ್ಯ ಎಂಬ ಪರಿಕಲ್ಪನೆಯೊಂದಿಗೆ ಮೂಡುಬಿದಿರೆ ವಲಯ ಅರಣ್ಯ ಇಲಾಖೆ, ಈದು ಗ್ರಾಮ ಪಂಚಾಯತ್, ಸರಕಾರಿ ಪ್ರೌಢಶಾಲೆ ಹೊಸ್ಮಾರು ಮತ್ತು ಅದರ ಇಕೋಕ್ಲಬ್ ಹಾಗೂ ಈದು ಮತ್ತು ನೂರಳ್‌ಬೆಟ್ಟು ಗ್ರಾಮ ಅರಣ್ಯ ಸಮಿತಿ ಇವುಗಳ ಜಂಟಿ ಸಹಯೋಗದೊಂದಿಗೆ ಬೀಜದುಂಡೆ ಅಭಿಯಾನ, ವನಮಹೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮವು ಹೊಸ್ಮಾರು ಪ್ರೌಢಶಾಲೆಯಲ್ಲಿ ನಡೆಯಿತು.
ವೃಕ್ಷಮಿತ್ರ ಪ್ರಶಸ್ತಿ ಪುರಷ್ಕೃತ ಮಹಮ್ಮದಾಲಿ ಅಬ್ಬಾಸ್ ಅವರು ಗಿಡಗಳನ್ನು ನೆಟ್ಟು, ಬೀಜದುಂಡೆಯನ್ನು ಅರಣ್ಯ ಪ್ರದೇಶದಲ್ಲಿ ಬೀಸಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮೂಡುಬಿದಿರೆಯ ಅರಣ್ಯ ಇಲಾಖೆಯು ಕಳೆದ ೫-೬ ವರ್ಷಗಳಿಂದ ವಿಶೇಷವಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಶಾಲಾ ಮಕ್ಕಳಿಗೆ ಚಿಣ್ಣರ ವನ್ಯ ದರ್ಶನದ ಮೂಲಕ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಅರಣ್ಯ ಸಂಪತ್ತನ್ನು ಬೆಳೆಸುವ ಮೂಲಕ ಉತ್ತಮ ದೇಶವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಜಿ. ಪಂ ಸದಸ್ಯೆ ದಿವ್ಯಶ್ರೀ ಜಿ. ಅಮೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪರಿಸರದ ಬಗ್ಗೆ ಮಕ್ಕಳಿಗೆ ಎಳವೆಯಲ್ಲಿ ಜಾಗೃತಿ ಮೂಡಿಸಿದರೆ ಅವರಿಗೆ ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯುವ ಆಯೋಜಿಸುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು. ಈದು ಗ್ರಾ. ಪಂಚಾಯತ್ ಅಧ್ಯಕ್ಷ ಪುರುಷೋತ್ತಮ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ ಸದಸ್ಯೆ ಮಂಜುಳಾ, ಪಂಚಾಯತ್ ಉಪಾಧ್ಯಕ್ಷೆ ಪದ್ಮಪ್ರಿಯ ಜೈನ್, ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ನೂರಳ್‌ಬೆಟ್ಟು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎನ್. ವಿಜಯಕುಮಾರ್ ಜೈನ್, ಈದು ಸಮಿತಿಯ ಅಧ್ಯಕ್ಷ ರಾಜು ಪೂಜಾರಿ, ಪಿಡಿಓ ಷಣ್ಮುಖ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply