Header Ads
Header Ads
Breaking News

ಆಳ್ವಾಸ್‍ನಲ್ಲಿ ಕ್ರಿಸ್ಮಸ್ ಸಂಭ್ರಮ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಸಾಯಂಕಾಲ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಆಳ್ವಾಸ್ ಕ್ರಿಸ್ಮಸ್ ಸಂಭ್ರಮ 2018′ ನಡೆಯಿತು. ಇನ್ನು  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ವಿದ್ಯಾರ್ಥಿಗಳೂ ಹಾಗೂ ಮಂಗಳೂರಿನ ಬ್ಲೂ ಏಜೆಂಲ್ಸ್ ತಂಡದಿಂದ ಕ್ರಿಸ್ಮಸ್ ವಿಶೇಷ ಗಾಯನ ಕಾರ್ಯಕ್ರಮ ಹಮ್ಮಿಕೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್ಶೀವಚನ ನೀಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಪೀಟರ್ ಪಾವ್ಲ್ ಸಲ್ದಾನಾ ಅವರು ದ್ವೇಷ ಮತ್ತು ಧರ್ಮ ಹೀಗೆ ವಿಭಜಿಸುವ ಗೋಡೆಗಳನ್ನು ಕಿತ್ತೆಸೆದು ಮಾನವೀಯತೆ ಬೆಸೆಯುವ, ಬಂಧುತ್ವವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಬಂಧುತ್ವ ಎನ್ನುವುದು ಜಾತಿ, ಮತ ಧರ್ಮದ ಎಲ್ಲೆ ಮೀರಿದ ಸಂಬಂಧವಾಗಿದೆ ಎಂದು ಹೇಳಿದರು.

ಶಿರ್ವ ಡಾನ್ ಬೋಸ್ಕೋ ಸಿ.ಬಿ.ಎಸ್.ಸಿ ಸಂಸ್ಥೆಯ ಪ್ರಾಂಶುಪಾಲ ವಂ.ಮಹೇಶ್ ಡಿ’ಸೋಜ ಕ್ರಿಸ್ಮಸ್ ಸಂದೇಶ ನೀಡಿದರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‍ನ ಸ್ಥಾಪಕ ಜೋಸೆಫ್ ಡಿ’ ಸೋಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತರ ಕೊಡುಗೆ ಅನನ್ಯವಾದದ್ದು. ಮದರ್ ತೆರೆಸಾರವರಂತಹ ಸಂತೆಯ ಕೊಡುಗೆ ನಮ್ಮೆಲ್ಲರಿಗೂ ಸ್ಪೂರ್ತಿಯಾದರೆ ಶಾಂತಿ, ಪ್ರೀತಿ, ಸಹಬಾಳ್ವೆಯನ್ನು ಮಾತು ಕೃತಿಯಲ್ಲಿ ಪಾಲಿಸುತ್ತಿರುವ ಕ್ರೈಸ್ತರ ಜೀವನ ಸಂದೇಶ ಅರ್ಥಪೂರ್ಣವಾದದ್ದು ಎಂದರು.

ಈ ಸಂದರ್ಭ ದಾಖಲಾತಿ ವಿಭಾಗದ ಅಧಿಕಾರಿ ಎಲ್.ಜೆ ಫೆರ್ನಾಂಡಿಸ್, ಉಪನ್ಯಾಸಕರಾದ ರಾಜೇಶ್ ಡಿಸೋಜಾ, ಸ್ಟ್ಯಾನಿ, ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು.

 

Related posts

Leave a Reply