Header Ads
Header Ads
Header Ads
Breaking News

ಟ್ರಕ್‌ನಡಿ ಸಿಲುಕಿ ದ್ವಿಚಕ್ರ ಸವಾರ ಸಾವು

ಮೂಡುಬಿದಿರೆಯ ಬೆಳುವಾಯಿ ಪೇಟೆಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶನಿವಾರ ಸಂಜೆ ನಡೆದ ಅಪಫಾತ ಪ್ರಕರಣದಲ್ಲಿ ದ್ವಿಚಕ್ರ ಸವಾರರೋರ್ವರು ಟ್ರಕ್‌ನಡಿಗೆ ಬಿದ್ದು ಮೃತಪಟ್ಟಿದ್ದಾರೆ.


ಕಾರ್ಕಳದಿಂದ ಮೂಡುಬಿದಿರೆಯತ್ತ ಬರುತ್ತಿದ್ದ ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರಾಗಿದ್ದ ಸಿದ್ಧಕಟ್ಟೆಯ ಪುರುಷೋತ್ತಮ ಯಾನೆ ಧರ್ಣಪ್ಪ(35) ಬೆಳುವಾಯಿ ಪೇಟೆಯಲ್ಲಿ ವಾಹನ ರಸ್ತೆಯ ಹೊಂಡ ತಪ್ಪಿಸುವಲ್ಲಿ ಆಯ ತಪ್ಪಿ ರಸ್ತೆಗೆ ಬಿದ್ದಿದ್ದು ಅದೇ ವೇಳೆಗೆ ಹಿಂದೆ ಬರುತ್ತಿದ್ದ ಟ್ರಕ್‌ನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇದೇ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸುನೀಲ್ (29) ಅವರಿಗೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಬಂಟ್ವಾಳ ಸಿದ್ಧಕಟ್ಟೆಯ ಮಂಚಕಲ್‌ಪರಿಸರದವರಾಗಿದ್ದಾರೆ. ಪುರುಷೋತ್ತಮ ವಿವಾಹಿತರು ಮತ್ತು ಮೃತ್ತಿಯಲ್ಲಿ ಮೇಸ್ತ್ರಿಯಾಗಿದ್ದರು.
ಮೂಡುಬಿದಿರೆ ಪೋಲೀಸರು ಟ್ರಕ್ ಚಾಲಕ ದಾವಣಗೆರೆಯ ರಾಘವೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply