Header Ads
Breaking News

ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮೂಡುಬಿದಿರೆ: ಈ ಬಾರಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು 650 ಅಂಕಗಳಿಗಿಂತ ಅಧಿಕ, 37 ಮಂದಿ 600 ಅಂಕಗಳಿಗಿಂತ ಅಧಿಕ,500 ರಿಂದ 600 ಅಂಕಗಳ ಒಳಗಡೆ, 139 ಮಂದಿ, 400 ರಿಂದ 500 ಅಂಕಗಳ ಒಳಗಡೆ 203 ವಿದ್ಯಾರ್ಥಿಗಳು, 300-400 ಅಂಕಗಳ ಒಳಗಡೆ 535 ವಿದ್ಯಾರ್ಥಿಗಳು ಅಂಕ ಗಳಿಸಿದ್ದು, ಒಟ್ಟು 914 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

720 ಅಂಕಗಳಲ್ಲಿ ಅರ್ನವ್ ಅಯ್ಯಪ್ಪ(685) ಅನರ್ಘ್ಯ ಕೆ(683)ಪಿ.ಎಸ್.ರವೀಂದ್ರ (670) ಖುಷಿ ಚೌಗಲೆ(661)ಪೂಜಾ ಜಿ.ಎಸ್ (656)ಚಂದುಸಾಬ್ ದಿವಾನ್‌ಸಾಬ್ ಪೈಲ್ವಾನ್ (651) ಚಿನ್ಮಯಿ ಆರ್.(650) ವರುಣ್ ತೇಜ್ ವೈ.ಡಿ(650) ಅಂಕ ಗಳಿಸಿದ್ದಾರೆ.

ಆಳ್ವಾಸ್ ಒಂದೇ ಕಾಲೇಜಿನಿಂದ 350ಕ್ಕೂ ಅಧಿಕ ಮಂದಿ ಸರ್ಕಾರಿ ವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯುತ್ತಿರುವುದೂ ವಿಶೇಷ. ಅಖಿಲ ಭಾರತ ಮಟ್ಟದಲ್ಲಿ ಪ.ವರ್ಗದ ವಿಭಾಗದಲ್ಲಿ ವಾಲ್ಮೀಕಿ ತೇಜಸ್ವಿನಿ 92 ಹಾಗೂ ಉಮೇಶ್ ಸಣ್ಣ ಹನುಮಪ್ಪ 119 ಹಾಗೂ ವಿಕಲ ಚೇತನರ ವಿಭಾಗದಲ್ಲಿ ಸುಶೀಲ 477ನೇ ರ್‍ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ವಿಭಾಗವಾರು ಡೀನ್ ಮತ್ತು ನೀಟ್ ತರಬೇತಿ ಬಳಗದವರು, ಆಳ್ವಾಸ್ ಪಿ.ಆರ್.ಒ. ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *