Header Ads
Header Ads
Breaking News

ಮಂಗಳೂರು-ಮೂಡುಬಿದಿರೆ ಹೈವೇ ದುರವಸ್ಥೆಗೆ ಸಂಸದರೇ ಹೊಣೆ ಸಿಪಿಐಎಂನ ಜಿಲ್ಲಾ ಮುಖಂಡ ಯಾದವ ಶೆಟ್ಟಿ ಆರೋಪ

ಮೂಡುಬಿದಿರೆ: ಎರಡು ಅವಧಿಯಲ್ಲಿ ಕಳೆದ ಒಂಭತ್ತೂವರೆ ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯನ್ನು ಅಗಲಗೊಳಿಸಿ ಸರಿಪಡಿಸಲು ಸಾಧ್ಯವಾಗಲಿಲ್ಲ. ಮುಕ್ಕಾಲು ಗಂಟೆಯಲ್ಲಿ ಮಂಗಳೂರಿಗೆ ಹೋಗಿ ಬರುವ ಹಾದಿಯಲ್ಲೀಗ ಒಂದೂವರೆ ಗಂಟೆಯ ಕಾಲಹರಣವಾಗುತ್ತಿದೆ. ಇದರ ನಡುವೆ ಟೋಲ್ ಗೇಟ್ ರಾಜಕಾರಣ ನಡೆಸಿ ಜಿಲ್ಲೆಯ ಜನತೆಗೆ ವಂಚಿಸಲಾಗುತ್ತಿದೆ ಸಿಪಿಐಎಂನ ಜಿಲ್ಲಾ ಮುಖಂಡ ಯಾದವ ಶೆಟ್ಟಿ ಆರೋಪಿಸಿದರು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ಸಿಪಿಐಎಂ ಹಾಗೂ ಕಾರ್ಮಿಕ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಿಪಿಐಎಂ, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ರಮಣಿ, ರಾಧಾ,ಗಿರಿಜ,ಲಕ್ಷ್ಮೀ, ಶಂಕರ್ ವಾಲ್ಪಾಡಿ, ಸೀತಾರಾಮ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಕಾರ್ಯಕರ್ತರೊಂದಿಗೆ ಪಾಲ್ಗೊಂಡಿದ್ದರು.ಇನ್ನು ಮೂಡುಬಿದಿರೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕರೆನೀಡಲಾಗಿರುವ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ಸುಗಳ ಸಂಚಾರ ಸ್ಥಗಿತ, ಶಾಲಾ ಕಾಲೇಜುಗಳಿಗೆ ರಜೆ ಹೊರತುಪಡಿಸಿದರೆ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಪೇಟೆಯಲ್ಲಿ ಜನಸಂಚಾರ ಕಡಿಮೆಯಿದ್ದ ಕಾರಣ ಕೆಲವೆಡೆ ಅಂಗಡಿಗಳು ಮುಚ್ಚಿದ್ದು ಬಿಟ್ಟರೆ ರಿಕ್ಷಾ, ಕಾರು, ಖಾಸಗಿ ವಾಹನಗಳು ಓಡಾಟ ನಡೆಸಿವೆ. ಕೆಲವು ಬ್ಯಾಂಕುಗಳು ತೆರೆದಿದ್ದರೆ, ಉಳಿದವು ವ್ಯವಹಾರ ನಡೆಸಿಲ್ಲ.

Related posts

Leave a Reply