Header Ads
Header Ads
Breaking News

ಯುಎಇಯಲ್ಲಿ ರಾಷ್ಟ್ರೀಯ ದಿನಾಚರಣೆ: ಕೆಐಸಿ, ಕಲ್ಚರಲ್ ಸೆಂಟರ್ನಿಂದ ಕಾರ್ಯಕ್ರಮ

ಕೆಐಸಿ ಯುಎಇ ಹಾಗೂ ಕಲ್ಚರಲ್ ಸೆಂಟರ್ ವತಿಯಿಂದ ಯುಎಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವು ವಿಜೃಂಭನೆಯಿಂದ ದುಬಾಯಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ವದೇಶೀ ನೇತಾರರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕೆಐಸಿ ಗ್ರಾಂಡ್ ಮೀಟ್‍ನ ಪದಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಉಸ್ತಾದ್ ಅಲವಿ ಕುಟ್ಟಿ ಹುದವಿ ರವರು, ಹಲವಾರು ಕುಟುಂಬಗಳ ಕಣ್ಣೀರ ಧಾರೆಯನ್ನು ಒರೆಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲಲು ಯು ಎ ಇ ರಾಷ್ಟ್ರದ ಕೊಡುಗೆಯನ್ನು ಎಂದೂ ಮರೆಯಲಸಾದ್ಯ. ಕಡಲಾಚೆಗೆ ಆಗಮಿಸಿದ ನಮ್ಮಂತಹ ಹಲವಾರು ಯುವ ಜನೆತೆಗೆ ಜಾತಿ  ವರ್ಣ ಪಂಗಡಗಳೆಂಬ ಭೇದ ಭಾವವನ್ನು ತೋರದೆ ಸರ್ವರನ್ನೂ ಸ್ವಾಗತಿಸಿ ಸರ್ವರಿಗೂ ಜೀವನದ ದಾರಿ ತೋರಿಸಿಕೊಟ್ಟ ಉದಾತ್ತ ರಾಷ್ಟ್ರವಾಗಿದೆ ಇದು ಎಂದರು.

ಕಾರ್ಯಕ್ರಮದಲ್ಲಿ ಸಯ್ಯದ್ ಶುಹೈಬ್ ತಂಘಳ್ ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಶುಭಹಾರೈಸಿದರು. ನಂತರ ಕೆ ಐ ಸಿ ಗ್ರಾಂಡ್ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಾಂತೂರ್ ರವರು ಸ್ವಾಗತಿಸಿ ಮಾತನಾಡಿ ಅನಿವಾಸಿಗಳಾದ ನಮ್ಮ ಮೇಲೆ ಈ ರಾಷ್ಟ್ರದ ತೋರುತ್ತಿರುವ ಉದಾತ್ತ ಮನೋಭಾವವನ್ನು ಸ್ಮರಿಸಿಕೊಂಡು , ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿರುವ ಯು ಎ ಇ ರಾಷ್ಟ್ರವು ಮುಂದೆಯೂ ಉತ್ತಮ ಆಡಳಿತದೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವದೇಶೀ ನೇತಾರರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕೆಐಸಿ ಗ್ರಾಂಡ್ ಮೀಟ್ ಪಧಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಭರತ್ ಕನ್ಸ್ಟ್ರಕ್ಷನ್ ಮುಸ್ತಫಾ ಎಸ್.ಎಂ ಸಯ್ಯದ್ ಅಸ್ಕರಲಿ ತಂಘಳ್ ಕೋಲ್ಪೆ ,ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ,  ಅಬ್ದುಲ್ ಲತೀಫ್ ಮದರ್ ಇಂಡಿಯಾ, ಮುಹಮ್ಮದ್ ಮುಸ್ತಾಕ್ ಕದ್ರಿ, ಪೆÇ್ರಫೆಸ್ಸರ್ ಅಬೂಬಕ್ಕರ್ ತುಂಬೆ, ಶಂಸುದ್ದೀನ್ ಸೂರಲ್ಪಾಡಿ, ಮಿರ್ ಮುಹಮ್ಮದ್ ಮುನವ್ವರ್ ಅಲಿ , ಡಾ . ಎಂ ಕೆ ಅಬ್ದುಲ್ ಹಾರಿಸ್, ನಾಸೀರ್ ಅಬ್ದುಲ್ ಖಾದರ್, ಯೂಸುಫ್ ಹಾಜಿ ಬೆರಿಕೆ , ಸಲೀಂ ಅಲ್ತಾಫ್ ಫರಂಗಿಪೇಟೆ , ಷರೀಫ್ ಕಾವು , ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply