Header Ads
Header Ads
Breaking News

ಶ್ರೀ ಮಹಾವೀರ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ಮೂಡುಬಿದಿರೆ: ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ, ಹಳೇ ವಿದ್ಯಾರ್ಥಿ ಸಹಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕ ಹಳೆ ವಿದ್ಯಾರ್ಥಿಗಳನ್ನು ಮತ್ತು ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿದ್ಯಾಗಿರಿ ಲಿಟ್ಲ್ ಸ್ಟಾರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸಾರಾ ಇಸ್ಮಾಯಿಲ್ ಅವರು ಮಾತನಾಡಿ, ನಮ್ಮ ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಗಳ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ತಾಳ್ಮೆ ಮತ್ತು ಸಹಿಷ್ಯುತೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ.  ಹಳೇ ವಿದ್ಯಾರ್ಥಿಗಳು ಸಂಘಟಿತರಾಗಿ ದುಡಿದರೆ, ತಾವು ಕಲಿತ ವಿದ್ಯಾಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈದಿರುವ ಕಾಲೇಜಿನ ಹಳೇ ವಿದ್ಯಾರ್ಥಿ ಕಾವು ಪ್ರೇಮನಾಥ ಶೆಟ್ಟಿ ಹಾಗೂ ಕೆಎಂಸಿ ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜೀವ್ ಮಲ್ಲಿಂಜೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಬಿ.ಸಿ.ಎ. ಪದವಿ ಪರೀಕ್ಷೆಯಲ್ಲಿ 5ನೇ ರ್ಯಾಂಕನ್ನು ಪಡೆದ ವಿದ್ಯಾರ್ಥಿನಿ ಸುನೇಹಾ ಮುಸ್ಕಾನ್ ಮತ್ತು ಬಿ.ಕಾಂ.ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದ ವಸುಧಾ ಎನ್. ಅವರನ್ನು ಗೌರವಿಸಲಾಯಿತು.

ಹಳೆ ವಿದ್ಯಾರ್ಥಿ ದಂತವೈದ್ಯ ವಿನಯ ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ಶ್ರೀಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ಹಳೆ ವಿದ್ಯಾರ್ಥಿನಿ ಗಾಯತ್ರಿ ಮತ್ತು ಧನಂಜಯ ,ಉದಯ ಕುಮಾರ್, ಪ್ರಸನ್ನ ಶೆಣೈ ಮತ್ತಿರರು ಉಪಸ್ಥಿತರಿದ್ದರು.

Related posts

Leave a Reply