Header Ads
Header Ads
Breaking News

ಮೂಡಬಿದರೆ:16ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವ

ಮೂಡಬಿದರೆಯ ಕಡಲಕೆರೆಯಲ್ಲಿ ನಡೆಯುವ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ದೊರಕಿತು.ಆಲಂಗಾರು ಚರ್ಚಿನ ಧರ್ಮಗುರು ರೆ.ಫಾ ವಾಲ್ಟರ್ ಡಿ’ಸೋಜ, ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ. ಈಶ್ವರ್ ಭಟ್, ನೂರಾನಿ ಮಸ್ಜೀದ್‌ನ ಮೌಲಾನ ಝೀಯ್ಯಾಲ್ಲಾ ಅವರು ಉದ್ಘಾಟಿಸಿದರು.

16ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳವು ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಕಾನೂನಿನ ಚೌಕಟ್ಟಿನೊಳಗೆ ಅಹಿಂಸಾತ್ಮಕವಾಗಿ 24 ಗಂಟೆಯೊಳಗೆ ನಡೆಸಲಾಗುವುದು ಎಂದು ಕಂಬಳ ಸಮಿತಿ ನಿರ್ಧರಿಸಿದೆ.ಈ ಜೋಡು ಕೆರೆ ಕಂಬಳದಲ್ಲಿ ಈ ಬಾರಿ ಸುಮಾರು 150ಕ್ಕೂ ಅಧಿಕ ಜತೆ ಕೋಣಗಳು ಭಾಗವಹಿಸಲಿವೆ. ಕಂಬಳದಲ್ಲಿ ಬೆತ್ತವನ್ನು ಬಳಸಲಾಗುವುದಿಲ್ಲ. ಆದರೆ ಅತಿಥಿಗಳಿಗೆ ಬೆತ್ತವನ್ನು ಸ್ಮರಣಿಕೆಯಾಗಿ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.

Related posts

Leave a Reply