Header Ads
Header Ads
Header Ads
Breaking News

ಮೂಡಬಿದಿರೆ ರಿಂಗ್‌ರೋಡ್ ಸುತ್ತಾ ಹೆಚ್ಚಿದ ವಾಹನ ದಟ್ಟಣೆ ಮಾರುಕಟ್ಟೆ ಮಧ್ಯಭಾಗದಲ್ಲಿ ಪಾದಾಚಾರಿಗಳಿಗೂ ತೊಂದರೆ

ಹೊಸತನದ ರೂಪದಲ್ಲಿ ಮೂಡಬಿದಿರೆ ಮಾರುಕಟ್ಟೆ ಇನ್ನೇನು ಸ್ವಲ್ಪ ಕಾಲದಲ್ಲಿ ರೂಪುಗೊಳ್ಳಲಿದೆ. ಈ ನಡುವೆ ಅದೆಷ್ಟೋ ರಗಳೆ ರಾದ್ಧಾಂತಗಳು ನಡೆದರೂ, ಅವೆಲ್ಲವನ್ನೂ ಮೀರಿ ಮಾರುಕಟ್ಟೆ ಸ್ಥಳಾಂತರಗೊಂಡಿದೆ. ಆದರೆ ಇವೆಲ್ಲವೂ ಮುಗಿಯಿತೂ ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ ಅದೇನೂ ಎಂದು ನೀವೇ ನೋಡಿ..

ನೂತನ ಮಾರುಕಟ್ಟೆ ನಿರ್ಮಾಣದ ಹಿನ್ನಲೆಯಲ್ಲಿ ಹಳೆ ದಿನವಹಿ ಮಾರುಕಟ್ಟೆಯಿಂದ ಸ್ವರಾಜ್ಯ ಮೈದಾನದಲ್ಲಿ ನಿರ್ಮಾಣಗೊಂಡಿರುವ ತಾತ್ಕಾಲಿಕ ಮಾರುಕಟ್ಟೆಗೆ ವ್ಯಾಪಾರಸ್ಥರು ಸ್ಥಳಾಂತರಗೊಂಡು ಇದೀಗ ನಾಲ್ಕು ದಿನಗಳು ಕಳೆದಿದ್ದು ತರಕಾರಿ ಮೀನು, ಮಾಂಸ ಸಹಿತ ಇತರ ಕೆಲವು ವ್ಯಾಪಾರಸ್ಥರ ವ್ಯಾಪಾರವು ಭರದಿಂದ ಸಾಗುತ್ತಿದೆಯಾದರೂ, ಇದೀಗ ಮೈದಾನದಲ್ಲಿ ದಿನವಹಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದೆ ಅಲ್ಲದೆ ರಿಂಗ್‌ರೋಡ್ ಮೀನು ಮತ್ತು ತರಕಾರಿ ಮಾರುಕಟ್ಟೆಯ ಮಧ್ಯಭಾಗದಲ್ಲಿ ಹಾದು ಹೋಗುತ್ತಿರುವುದರಿಂದ ವಾಹನ ದಟ್ಟನೆ ಹೆಚ್ಚಾಗಿರುವುದರಿಂದ ಪಾದಾಚಾರಿಗಳು ಸ್ವಲ್ಪ ತೊಂದರೆಯನ್ನು ಅನುಭವಿಸುವಂತ್ತಾಗಿದೆ.

 

ಇದೀಗ ಇಲ್ಲಿ ತರಕಾರಿ, ಮೀನು, ಮಾಂಸ ಹಾಗೂ ಇತರ ಅಂಗಡಿ ಕೋಣೆಗಳನ್ನೊಳಗೊಂಡ ಒಟ್ಟು 120 ಅಂಗಡಿ ಕೋಣೆಗಳನ್ನು ತೆರೆಯಲಾಗಿದೆ ಮತ್ತು ಈಗಾಗಲೇ ಹೆಚ್ಚಿನ ಅಂಗಡಿಯವರು ತಮ್ಮ ಸಾಮಾಗ್ರಿಗಳನ್ನು ಅಲ್ಲಿಗೆ ಸ್ಥಳಾತರಿಸಿ ವ್ಯಾಪಾರವನ್ನು ಆರಂಭಿಸಿದ್ದಾರೆ ಮತ್ತು ಸುಮಾರು 44 ಅಂಗಡಿ ಕೋಣೆಗಳಿಗೆ ಶಟರನ್ನು ಅಳವಡಿಸದೆ ಇರುವುದರಿಂದ ಇಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಉಳಿದ ಅಂಗಡಿ ವ್ಯಾಪಾರಿಗಳ ಸಾಮಾಗ್ರಿಗಳು ಇನ್ನಷ್ಟೇ ಸ್ಥಳಾಂತರಗೊಳ್ಳಬೇಕಾಗಿದೆ.

ಸ್ಥಳಾಂತರದ ಸಂದರ್ಭದಲ್ಲಿ ಕೆಲವು ಮಾರುಕಟ್ಟೆ ವ್ಯಾಪಾರಸ್ಥರು ಸ್ವರಾಜ್ಯ ಮೈದಾನಕ್ಕೆ ತೆರಳಲು ಅಲ್ಲಿ ತಮಗೆ ಬೇಕಾದ ರೀತಿಯಲ್ಲಿ ಅಂಗಡಿ ಕೋಣೆಗಳ ಕಾಮಗಾರಿಗಳು ಪೂರ್ಣಗೊಂಡಿಲ್ಲ, ತಮಗೆ ಪುರಸಭೆಯು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡಿಲ್ಲ, ಅಧಿಕ ಸಾಮಾಗ್ರಿಗಳು, ತರಕಾರಿಗಳು ಇರುವುದರಿಂದ ಒಂದೇ ದಿನದಲ್ಲಿ ಸ್ಥಳಾಂತರಿಸುವುದು ಕಷ್ಟ ಸಾಧ್ಯ ಈ ನಿಟ್ಟಿನಲ್ಲಿ ಹಳೇ ಮಾರ್ಕೆಟ್‌ನಲ್ಲಿ 1 ವಾರದ ವ್ಯಾಪಾರ ಮಾಡಲು ಅವಕಾಶ ನೀಡಬೇಂದು ಆಗ್ರಹಿಸಿ ದಿನವಹಿ ಮಾರ್ಕೆಟ್‌ನ ಎದುರುಗಡೆ ಪ್ರತಿಭಟನೆ ನಡೆಸಿದ್ದರು ಆದರೆ ಇದೀಗ ಅಲ್ಲಿಗೆ ಸ್ಥಳಾಂತರಗೊಂಡು ವ್ಯಾಪಾರವನ್ನು ಆರಂಭಿಸಿರುವ ಕೆಲವು ವ್ಯಾಪಾರಸ್ಥರು “ಪುರಸಭೆಯು ಉತ್ತಮ ರೀತಿಯಲ್ಲಿ ತಾತ್ಕಾಲಿಕ ಮಾರುಕಟ್ಟೆಯನ್ನು ನಿರ್ಮಿಸಿದೆ ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಿದೆ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಆದರೆ ಹಳೆ ಮಾರುಕಟ್ಟೆಯಲ್ಲಿ ಇಲ್ಲದವರು ಕೂಡಾ ಇದೀಗ ಇಲ್ಲಿ ಸಂತೆಯಂತೆ ಓಪನ್ ಆಗಿ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ ಇತರ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ತರಕಾರಿ ವ್ಯಾಪಾರಸ್ಥ ಅಶ್ರಫ್ ತಿಳಿಸಿದ್ದಾರೆ.

ತರಕಾರಿ ಮಾರುಕಟ್ಟೆ ಮತ್ತು ಮೀನು ಮಾಂಸಗಳ ಮಾರ್ಕೆಟ್‌ಗಳ ಮಧ್ಯೆ ರಿಂಗ್ ರೋಡ್ ಹಾದು ಹೋಗಿರುವುದರಿಂದ ಇಲ್ಲಿ ವಾಹನಗಳು ರಭಸವಾಗಿ ಹಾದು ಹೋಗುತ್ತಿವೆ. ಮತ್ತು ವಾಹನಗಳ ದಟ್ಟಣೆ ಗ್ರಾಹಕರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ರಸ್ತೆ ಅಪಾಯಕಾರಿಯಾಗಿದ್ದು ಇಲ್ಲಿ ಪಾದಾಚಾರಿಗಳು ಆಚೆಯಿಂದ ಈಕಡೆಗೆ ಹೋಗಿ ಬರಲು ಕಷ್ಟ ಸಾಧ್ಯವಾಗುತ್ತಿದೆ ಬಿಟ್ಟರೆ ಉಳಿದಂತೆ ಈ ಮಾರ್ಕೆಟ್ ಉತ್ತಮ ಮಾರ್ಕೆಟ್ ಎಂದು ಗ್ರಾಹಕರು ಮತ್ತು ವ್ಯಾಪಾರಸ್ಥರು ಹೇಳಿಕೊಳ್ಳುತ್ತಿದ್ದಾರೆ.

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Related posts

Leave a Reply