Header Ads
Breaking News

ಮೂಡಬಿದ್ರೆಯಲ್ಲಿ ಸಮಗ್ರ ಕೃಷಿ-ಮಾಹಿತಿ ಶಿಬಿರ : ಕಲ್ಲಬೆಟ್ಟುವಿನ “ಅಕ್ಷಯಧಾಮ” ಸಭಾಭವನದಲ್ಲಿ ನಡೆದ ಕಾರ್ಯಕ್ರಮ

ಮೂಡುಬಿದಿರೆ: ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಇಲಾಖೆ ಮಂಗಳೂರು ತಾಲ್ಲೂಕು ಹಾಗೂ ಕಲ್ಲಬೆಟ್ಟು ಸೇವಾ ಸಹಕಾರ ಸಂಘ ಇವುಗಳ ಸಹಯೋಗದಲ್ಲಿ ಕಲ್ಲಬೆಟ್ಟುವಿನ “ಅಕ್ಷಯಧಾಮ” ಸಭಾಭವನದಲ್ಲಿ ಮಂಗಳವಾರ ಸಮಗ್ರ ಕೃಷಿ -ಮಾಹಿತಿ ಶಿಬಿರವು ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೃಷಿ ರೈತನ ಜೀವನಾಧಾರ. ಕೃಷಿ ಅಧಿಕಾರಿಗಳು ರೈತರಿಗೆ ಸಮಗ್ರ ಕೃಷಿಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಅಗತ್ಯವಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ವಹಿಸಿದ್ರು. ಪುರಸಭಾ ಸದಸ್ಯೆ ಸುಜಾತ ಶಶಿಧರ್ ಕೋಟ್ಯಾನ್, ಪ್ರಗತಿಪರ ಕೃಷಿಕರಾದ ಸೀತಾರಾಮ ಶೆಟ್ಟಿ, ಕೃಷ್ಣ ಭಟ್ ಮಕ್ಕಿ, ಸೂರ್ಯಣ್ಣ ಹೆಗ್ಡೆ ಕಲ್ಲಬೆಟ್ಟು, ಲಕ್ಷ್ಮಣ ಕೋಟ್ಯಾನ್ ಶಿರ್ತಾಡಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.

 

Related posts

Leave a Reply

Your email address will not be published. Required fields are marked *