Header Ads
Breaking News

ಮೂಡಬಿದ್ರೆಯಲ್ಲಿ ಸಿ.ಐ.ಟಿ.ಯು ಪ್ರತಿಭಟನೆ

ಬ್ಯಾಂಕ್‍ಗಳ ವಿಲೀನಿಕರಣ, ವಿಮಾನ ನಿಲ್ದಾಣ, ಬಂದರು ಮುಂತಾದುಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಅಭಿವೃದ್ಧಿ ಎಂದು ತೋರಿಸುತ್ತಿರುವ ನರೇಂದ್ರ ಮೋದಿ ತನ್ನ ಸ್ನೇಹಿತರಾದ ಅಂಬಾನಿ-ಅದಾನಿ ಕಂಪನಿಗಳನ್ನು ಶ್ರೀಮಂತಗೊಳಿಸಲು ಹೊರಟಿದ್ದಾರೆ. ದೇಶದಲ್ಲಿ ಟಾಟಾ-ಬಿರ್ಲಾರಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಕಟ್ಟಡ ಕಾರ್ಮಿಕರಿಗೂ ಇದೆ. ಅಭಿವೃದ್ಧಿಯ ಹೆಸರಲ್ಲಿ ಕಾರ್ಮಿಕರಿಗೆ ಮೋಸ ಮಾಡಲು ಹೊರಟರೆ ನಾವು ಬಿಡಲಾರೆವು ಎಂದು ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಎಚ್ಚರಿಸಿದ್ದಾರೆ. 

ಅವರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಒತ್ತಾಯಿಸಿ ಸಿ.ಐ.ಟಿ.ಯು ಮೂಡುಬಿದಿರೆ ತಾಲೂಕು ಸಮಿತಿಯಿಂದ ತಾಲೂಕು ಕಛೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯನ್ನದ್ದೇಶಿಸಿ ಮಾತನಾಡಿದರು. ಬ್ಯಾಂಕ್‍ಗಳ ವಿಲೀನಿಕರಣದಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್ ಪಾಸ್‍ಬುಕ್‍ಗಳ ಬದಲಾವಣೆಯ ಪ್ರಕ್ರಿಯೆಗಳು ಆಗದಿರುವುದರಿಂದ ಕಾರ್ಮಿಕರಿಗೆ ಬೇರೆ ಬೇರೆ ಯೋಜನೆಗಳಿಂದ ಸಿಗುವ ಸವಲತ್ತುಗಳಿಗೆ ತೊಂದರೆಯಾಗುತ್ತಿದೆ ಆದರೆ ಶ್ರೀಮಂತರ ಕಂಪನಿಗಳಿಗೆ ಆದಾಯ ಮಾಡಲು ಸುಲಭವಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾತನಾಡಿದರು. ಮೂಡುಬಿದಿರೆ ತಾಲೂಕು ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ರಾಧ, ಬಿಸಿಯೂಟ ಜಿಲ್ಲಾ ಕಾರ್ಯದರ್ಶಿ ಗಿರಿಜಾ, ಕಟ್ಟಡ ಕಾರ್ಮಿಕರ ಕಾರ್ಯದರ್ಶಿ ಶಂಕರ, ರಿಕ್ಷಾ ಯೂನಿಯನ್ ಉಲಧ್ಯಕ್ಷ ವಿಶ್ವನಾಥ, ಸಿ.ಐ.ಟಿ.ಯುನ ಲಕ್ಷ್ಮೀ, ಸುಂದರ ಶೆಟ್ಟಿ, ತಸ್ರೀಫ್, ಕೃಷ್ಣಪ್ಪ ನಡಿಗುಡ್ಡೆ ಮತ್ತು ಪ್ರಮೀಳ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

Related posts

Leave a Reply

Your email address will not be published. Required fields are marked *