Header Ads
Breaking News

ಮೂಡಬಿದ್ರೆಯ ಜೈನಮಠದಲ್ಲಿ ಟ್ರಾಫಿಕ್ ಸಂವಾದ : “ನಮ್ಮ ಗ್ರಾಮ ನಮ್ಮ ಹೆಮ್ಮೆ” ಕಾರ್ಯಕ್ರಮ

ಮೂಡುಬಿದಿರೆ : ಅಪ್ರಾಪ್ತರು ವಾಹನ ಚಲಾಯಿಸಿ ಅಪಾಘಾತವಾಗಿ ಜೀವಹಾನಿಯಾದಲ್ಲಿ ಯಾವುದೇ ರೀತಿಯ ವಿಮೆ ಸಿಗುವುದಿಲ್ಲ. ಹೆತ್ತವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಅಪ್ರಾಪ್ತರು ಮಾತ್ರವಲ್ಲ ಅವರ ಹೆತ್ತವರು ಕೂಡ ಜಾಗರೂಕತೆವಹಿಸಬೇಕಾಗಿದೆ ಟ್ರಾಫಿಕ್ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಹೇಳಿದರು.ನಮ್ಮ ಗ್ರಾಮ ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಶ್ರೀದಿಗಂಬರ ಜೈನಮಠ ಮೂಡುಬಿದಿರೆ ಹಾಗೂ ಶ್ರೀಧವಲತ್ರಯ ಜೈನಕಾಶೊ ಟ್ರಸ್ಟ್ ಸಹಯೋಗದೊಂದಿಗೆ ಇಲ್ಲಿನ ಶ್ರೀಜೈನಮಠದ ರಮಾರಾಣಿ ಶೋಧ ಸಂಸ್ಥಾನದ ಸಭಾಭವನದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ರುಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಬೀಟ್ ಪೊಲೀಸ್ ಅರುಣ್, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *