Header Ads
Header Ads
Breaking News

ಮೂಡಿಬಿದರೆಯ ಕಡಂದಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ನಾವು ತಿನ್ನುವ ಹೆಚ್ಚಿನ ಬೇಕರಿ ತಿನಿಸುಗಳನ್ನು ಮಿನರಲ್ ಆಯಿಲ್ ಉಪಯೋಗಿಸಿ ಮತ್ತು ಮೈದಾ ಹಿಟ್ಟಿನಿಂದ ತಯಾರಿಸುತ್ತಿದ್ದು ಇದನ್ನು ತಿನ್ನುವುದರಿಂದ ಗುದ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ಇಂತಹ ಹಾನಿಕಾರಕ ತಿನಿಸುಗಳಿಂದ ನಾವು ದೂರವಿರಬೇಕು ಎಂದು ಪತ್ರಕರ್ತ ಧನಂಜಯ ಮೂಡುಬಿದಿರೆ ಹೇಳಿದರು. ಅವರು ಕಡಂದಲೆ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯುತ್ತಿರುವ ಸುರತ್ಕಲ್ ಗೋವಿಂದದಾಸ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಆರೋಗ್ಯವಂತ ಬದುಕು” ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಉಪನ್ಯಾಸಕಿ ಡಾ.ಚೇತನಾ ಬಿ.ಕೆ ಅಧ್ಯಕ್ಷತೆಯನ್ನು ವಹಿಸಿದ್ದರು. ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಪೈ ವೆಂಕಟರಮಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *