Header Ads
Header Ads
Header Ads
Breaking News

ಮೂಡುಕುದ್ರುವಿನಲ್ಲಿ ಹಳ್ಳಿ ಜೀವನದ ಸೊಗಡು ತೋರ್ಪಡಿಸುವ ಕಾರ್ಯಕ್ರಮ

ಉಡುಪಿ ಪ್ರವಾಸೋದ್ಯಮಕ್ಕೆ ಹಳ್ಳಿಯ ಮೆರಗನ್ನು ನೀಡುವ ದೃಷ್ಟಿಯಿಂದ ಕಲ್ಯಾಣ್ ಪುರದ ಮೂಡುಕುದ್ರುವಿನಲ್ಲಿ ವಿಶ್ವ ಪ್ರವಾಸೋದ್ಯಮದ ಪ್ರಯುಕ್ತ ಕಾರ್ಯಾಕ್ರಮವನ್ನು ಆಯೋಜಿಸಲಾಗಿತ್ತು. ಹಳ್ಳಿ ಜೀವನದ ಸೊಗಡನ್ನು ಪ್ರವಾಸಿಗರಿಗೆ ತೋರ್ಪಡಿಸುವ ದೃಷ್ಟಿಯಿಂದ ಹಾಗೂ ಹಳ್ಳಿ ಜನರಿಗೂ ಕೂಡ ಆರ್ಥಿಕವಾಗಿ ಸಹಕಾರವಾಗಲೂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೂಡು ಕುದ್ರುವಿನಂತ ಸುಂದರ ಪ್ರದೇಶವನ್ನು ಇತರರಿಗೆ ತೋರಿಸುವ ದೃಷ್ಟಿಯಲ್ಲಿ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ನಮ್ಮ ಜಿಲ್ಲೆಯವರು ಮತ್ತು ಹೊರ ಜಿಲ್ಲೆಯವರಿಗೂ ಈ ಪ್ರದೇಶದ ಪರಿಚಯವಾಗಬೇಕು ಜೊತೆಗೆ ಮೂಡು ತೋನ್ಸೆಯ ಜನರಿಗೂ ಆರ್ಥಿಕ ವಾಗಿ ಸಹಾಯವಾಗಬೇಕು ಇದರ ಸಂಪೂರ್ಣ ಯೋಜನೆ ಇಲ್ಲಿನ ಗ್ರಾಮ ಪಂಚಾಯತ್ ಮತ್ತು ಸ್ವಸಹಾಯ ಸಂಘಗಳದ್ದು ಇದೇ ಸಮೂದಾಯ ಆಧಾರಿತ ಪ್ರವಾಸೋಧ್ಯಮ. ಇಲ್ಲಿಯ ಆಚಾರ ವಿಚಾರಗಳನ್ನು ಇತರರಿಗೆ ತೋರಿಸುವುದು ಮುಖ್ಯ ಉದ್ಧೇಶವಾಗಿದೆ ಎಂದರು. ಸ್ವ ಸಹಾಯ ಸಂಘಗಳ ಸದಸ್ಯರಿಂದ ಮಾರಟ ಮಳಿಗೆಗಳು ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply