Header Ads
Header Ads
Header Ads
Breaking News

ಮೂಡುಪೆರಂಪಳ್ಳಿಯಲ್ಲಿ ಬಾಲ್ಯ ವಿವಾಹದ ಸಿದ್ಧತೆ ಅಧಿಕಾರಿಗಳಿಂದ ದಾಳಿ, ನಿಂತ ವಿವಾಹ ಪ್ರಕ್ರಿಯೆ

ಉಡುಪಿಯ ಮೂಡುಪೆರಂಪಳ್ಳಿಯಲ್ಲಿ ಬಾಲ್ಯವಿವಾಹ ಪ್ರಕರಣ ಬೆಳಕಿಗೆ ಬಂದಿದೆ. ವಿವಿಧ ಇಲಾಖಾಧಿಕಾರಿಗಳ ತಂಡ ಬೆಳಂಬೆಳಗ್ಗೆ ಮನೆಗೆ ದಾಳಿ ನಡೆಸಿ ಬಾಲ್ಯವಿವಾಹ ತಡೆದಿದ್ದಾರೆ.

ಮೀನುಗಾರ ಕುಟುಂಬವೊಂದು ಮೂರು ಹೆಣ್ಣು ಮಕ್ಕಳಲ್ಲಿ ಮೊದಲನೆಯ ಬಾಲಕಿಯನ್ನು ತುರ್ತಾಗಿ ಮದುವೆ ಮಾಡಿಸಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಬಾಲಕಿ ಮನೆಗೆ ದಾಳಿ ನಡೆಸಿ ಮನೆಯವರ ಮನವೊಲಿಸಿ ಮದುವೆಯನ್ನು ನಿಲ್ಲಿಸಿದ್ದಾರೆ. ಹುಡುಗ ರಾಘು ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾನೆ.

ಈ ಹುಡುಗನ ಮನೆಯವರು ಮೀನುಗಾರರಾದ ಹುಡುಗಿ ತಂದೆಯೊಂದಿಗೆ ಮದುವೆ ಮಾತುಕತೆ ನಡೆಸಿ ಮದುವೆ ನಡೆಸುವ ನಿರ್ಧಾರಕ್ಕೆ ಬಂದಿದ್ರು. ಅದರಂತೆ ಮೂಡುಪೆರಂಪಳ್ಳಿಯ ಶ್ರೀಶಾ ಭಟ್ ಮನೆಯಲ್ಲೆ 16 ವರ್ಷದ ಬಾಲಕಿ ಹಾಗೂ ಸುಮಾರು 30 ವರ್ಷದ ರಘು ಜೊತೆ ಮದುವೆ ನಡೆಯಬೇಕಿತ್ತು. ಕೂಡಲೇ ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ. ಮಣಿಪಾಲ ಪೊಲೀಸರು ಬಾಲಕಿ ಮನೆಗೆ ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ. ಬಾಲ್ಯವಿವಾಹ ಅಪರಾಧ ಎನ್ನುವುದೇ ಬಾಲಕಿಯ ಪೋಷಕರಿಗೆ ತಿಳಿದಿಲ್ಲ ಎನ್ನೋದೇ ವಿಪರ್ಯಾಸ…
ವರದಿ : ಪಲ್ಲವಿ ಸಂತೋಷ್

Related posts

Leave a Reply