Header Ads
Header Ads
Breaking News

ಮೂಡುಬಿದರೆಯಲ್ಲಿ ಕರಿಷ್ಮಾ ಸಿಲ್ಕ್ಸ್ ಶುಭಾರಂಭ

ಮೂಡುಬಿದರೆಯ ಮುಖ್ಯ ರಸ್ತೆಯ ಹೊಟೇಲ್ ಪಂಚರತ್ನ ಇಂಟರ್‌ನ್ಯಾಷನಲ್ ಬಿಲ್ಡಿಂಗ್‌ನಲ್ಲಿ ಕರಿಷ್ಮಾ ಸಿಲ್ಕ್ಸ್ ಶುಭಾರಂಭಗೊಂಡಿತು.
ನೂತನ ಬಟ್ಟೆ ಮಳಿಗೆಯನ್ನು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತ ಬೈಲ್‌ರವರು ಉದ್ಘಾಟಿಸಿ ಅಶೀರ್ವಚನವನ್ನು ನೀಡಿದರು. ಮುಖ್ಯ ಅತಿಥಿಗಲಾಗಿ ನಿಶ್ಮಿತಾ ಟವರ್‍ಸ್‌ನ ಮಾಲಕರಾದ ನಾರಾಯಣ ಪಿ.ಎಂ. ಹೊಟೇಲ್ ಪಂಚರತ್ನ ಇಂಟರ್‌ನ್ಯಾಷನಲ್ ಮಾಲಕರಾದ ತಿಮ್ಮಯ್ಯ ಶೆಟ್ಟಿ, ಹಂಡೇಲುಗುತ್ತು ಧನಕೀರ್ತಿ ಬಲಿಪ ಹಾಗೂ ಡಾ. ವಿನಯ ಅಳ್ವರವರು ಆಗಮಿಸಿ ನೂತನ ಬಟ್ಟೆ ಮಳಿಗೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಕಬೀರ್ ಟಿಬೇಟ್‌ರವರು ಆಗಮಿಸಿದ ಅತಿಥಿಗಣ್ಯರು ಹಾಗೂ ಗ್ರಾಹಕರನ್ನು ಸ್ವಾಗತಿಸಿ ನೂತನ ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು.

ಈ ಬಟ್ಟೆ ಮಳಿಗೆಯಲ್ಲಿ ಮದುವೆಯ ಸೀರೆಗಳು, ಲೆಹೆಂಗಾ,, ಡಿಸೈನ್ ಸೀರೆಗಳು, ಹಾಗೂ ಸಲ್ವಾರ್ ಹಾಗೂ ಟಾಪ್ಸ್‌ಗಳು ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ.

Related posts

Leave a Reply