Header Ads
Breaking News

ಮೂಡುಬಿದರೆಯಲ್ಲಿ ಜಿಲ್ಲಾ ಮಟ್ಟದ “ಕೈ ಬರಹ” ಸ್ಪರ್ಧೆ

ಮೂಡುಬಿದಿರೆ : ದುಂಡಾಗಿ ಬರೆಯುವುದು ಒಂದು ಕಲೆ. ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಬೇರೆ ಬೇರೆ ರೀತಿಯ ಪ್ರತಿಭೆಗಳಿರುತ್ತದೆ. ಕೆಲವರು ಓದುವುದರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಬಹುದು ಅದೇ ರೀತಿ ಇನ್ನುಳಿದ ವಿದ್ಯಾರ್ಥಿಗಳು ದುಂಡಗಿನ ಅಕ್ಷರಗಳನ್ನು ಬರೆಯುವ ಮೂಲಕ ಗಮನಸೆಳೆಯುತ್ತಾರೆಂದು ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ವೇತಾ ಜಿ.ಎಸ್. ಹೇಳಿದರು.

ದ.ಕ ಜಿಲ್ಲಾ ಮಟ್ಟದ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ “ಕನ್ನಡ”, “ಇಂಗ್ಲೀಷ್” ಮತ್ತು “ಹಿಂದಿ” ಕೈ ಬರಹ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರುಗಳಾದ ಗಣೇಶ್ (ಮಚ್ಚಿನ), ವಿದ್ಯಾಲತಾ (ಹೊಸಂಗಡಿ), ಚಲಪತಿ (ಪಂಜ) ಹಾಗೂ ನೀರುಮಾರ್ಗದ ಸಾವಿತ್ರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *