Header Ads
Breaking News

ಮೂಡುಬಿದರೆಯಲ್ಲಿ ದ್ವಿಪಥ-ಚತುಷ್ಪಥ ರಸ್ತೆ ಉದ್ಘಾಟನೆ : 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದ್ವಿಪಥ ರಸ್ತೆ

ಮೂಡುಬಿದಿರೆ : ಲೋಕೋಪಯೋಗಿ ಅನುದಾನದಿಂದ ವಿದ್ಯಾಗಿರಿಯಿಂದ ಸ್ವರಾಜ್ಯ ಮೈದಾನವರೆಗೆ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದ್ವಿಪಥ ರಸ್ತೆ ಮತ್ತು ರೋಟರಿ ಶಾಲೆಯ ಎದುರುಗಡೆಯಿಂದ ಮೆಸ್ಕಾಂ ಕಛೇರಿವರೆಗೆ 1.30 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚತುಷ್ಪಥ ರಸ್ತೆಯನ್ನು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಸುಗಮ ಸಂಚಾರಕ್ಕೆ ಸಹಕಾರಿಯಾಗುವಂತೆ ರಸ್ತೆಗಳನ್ನು ಅಗಲೀಕರಣಗೊಳಿಸಲಾಗಿದೆ. ಪೇಟೆಯಿಂದ ಹಾದು ಹೋಗುವ ಮತ್ತು ಪೇಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಒಳ ರಸ್ತೆಗಳನ್ನು ಅಗಲೀಕರಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಇದಕ್ಕಾಗಿ ರೂ 5 ಕೋಟಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದರು.

ಈ ಸಂದರ್ಭ ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಸ್ವಾತಿ ಪ್ರಭು, ರಾಜೇಶ್ ನಾಯ್ಕ್, ಶ್ವೇತಾ ಕುಮಾರಿ, ದಿವ್ಯಾ ಜಗದೀಶ್, ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸದಸ್ಯರಾದ ಗಿರೀಶ್ ಹಂಡೇಲು, ನಾಗವರ್ಮ ಜೈನ್, ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೋಯ್ಲಸ್ ಡಿ”ಸೋಜಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *