Header Ads
Header Ads
Breaking News

ಮೂಡುಬಿದರೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ. ಪುರಸಭೆಯಿಂದ ಮುಂದುವರೆದ ಕಾರ್ಯಾಚರಣೆ, ದಂಡ.

ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಬಳಸದಂತೆ ಪುರಸಭೆಯು ಕಳೆದ ಒಂದು ತಿಂಗಳಿನಿಂದ ಜಾಗೃತಿ ಮೂಡಿಸುತ್ತಾ ಬಂದಿದ್ದರೂ ಮೂಡುಬಿದಿರೆಯ ವಾರದ ಸಂತೆಯಾಗಿರುವ ಶುಕ್ರವಾರದಂದು ಮತ್ತೆ ಕಾರ್ಯಾಚರಣೆಯನ್ನು ಮುಂದುವರೆಸಿದ ಪುರಸಭೆಯ ಅಧಿಕಾರಿಗಳು ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಬಳಸುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮತ್ತು ನಾನ್ ವೋವನ್ ಬ್ಯಾಗ್‌ಗಳನ್ನು ವಶ ಪಡಿಸಿಕೊಂಡು ದಂಡ ವಿಧಿಸಿದ್ದಾರೆ.ಗ್ರಾಹಕರು ತರಕಾರಿ ಸಾಮಾನುಗಳನ್ನು ತುಂಬಿಸಿಕೊಂಡು ಹೋಗಲು ತಂದಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಂಡು ಅವರಿಗೂ ದಂಡವನ್ನು ವಿಧಿಸಿ ಬಟ್ಟೆಯ ಚೀಲಗಳನ್ನು ನೀಡಲಾಯಿತು.ಕಾರ್ಯಾಚರಣೆಯಲ್ಲಿ ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್., ಮಂಜುನಾಥ್, ಆನಂದಬಾಬು, ರವಿರಾಜ್, ದಾಮೋಧರ್, ಜನಾರ್ಧನ್, ಪೌರಕಾರ್ಮಿಕರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Reply