Header Ads
Header Ads
Breaking News

ಮೂಡುಬಿದರೆಯಲ್ಲಿ ರೈತರಿಗೆ ಗುರುತಿನ ಚೀಟಿ ವಿತರಣೆ. ರೈತರಿಗೆ ಶೀಘ್ರದಲ್ಲೇ ಸರಕಾರದ ಸವಲತ್ತು ಪಡೆಯಲು ಅನುಕೂಲ. ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆ.

ಮೂಡುಬಿದಿರೆ, : ರಾಜ್ಯದ ಕೃಷಿ ಸಚಿವ ಎನ್.ಹೆಚ್.ಶಿವ ಶಂಕರ ರೆಡ್ಡಿ ಅವರು ಮೂಡುಬಿದಿರೆಯ ರೈತ ಸಂಪರ್ಕ ಕೇಂದ್ರ, ಪುತ್ತಿಗೆ ಗ್ರಾಮದ ಕಂಚಿಬೈಲು ಹಾಗೂ ಕಡಂದಲೆಯ ಸಂತೋಷ್ ಶೆಟ್ಟಿ ಅವರ ಆಡು ಸಾಕಾಣೆ ಕೇಂದ್ರಗಳಿಗೆ ಭೇಟಿ ನೀಡಿದರು.ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಯಂತ್ರಗಳನ್ನು ವಿತರಿಸಿ ಮಾತನಾಡಿ ರೈತರಿಗೆ ಶೀಘ್ರದಲ್ಲೆ ಸರಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಗುರುತು ಚೀಟಿಯನ್ನು ಪಡೆಯಲು ರೈತರು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು. ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಯಾಂತ್ರಿಕ ಕೃಷಿಗೆ ರೈತರು ಒತ್ತು ಕೊಡಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡಲು ಬದ್ಧ ಎಂದರು.ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply