Header Ads
Header Ads
Breaking News

ಮೂಡುಬಿದರೆಯಲ್ಲಿ 3ನೇ ವಲಯದ ಸಿಐಟಿಯು ಸಮ್ಮೇಳನ

ಮೂಡುಬಿದಿರೆ : ಇಂದಿನ ದಿನಗಳಲ್ಲಿ ದೇಶದೆಲ್ಲೆಡೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಹೆಚ್ಚೆಚ್ಚು ಜಾರಿಗೊಳ್ಳುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರದ ನೋಟು ರದ್ದತಿ, ಜಿಎಸ್‌ಟಿ ಕ್ರಮಗಳಿಂದಾಗಿ ಲಕ್ಷಾಂತರ ಕೈಗಾರಿಕೆಗಳು ಮುಚ್ಚಿದ್ದು, ಕಾರ್ಮಿಕ ವರ್ಗ ಉದ್ಯೋಗಗಳನ್ನು ಕಳೆದುಕೊಂಡು ನಿರುದ್ಯೋಗದ ಕೂಪಕ್ಕೆ ಬಿದ್ದಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಅಭಿಪ್ರಾಯ ಪಟ್ಟರು.

ಮೂಡುಬಿದಿರೆ ಸಮಾಜ ಮಂದಿರದ ಕಾಂ.ಬಿ.ಮಾಧವ ವೇದಿಕೆಯಲ್ಲಿ ಜರುಗಿದ ಸಿಐಟಿಯು ಮೂಡುಬಿದಿರೆ ವಲಯ 3ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರವು ಎಲ್ಲಾ ರಂಗಗಳನ್ನು ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು  ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಸೌಹಾರ್ದತೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಇಡೀ ದೇಶವನ್ನು ಒಂದಾಗಿ ನಿಲ್ಲುವಂತೆ ಮಾಡುವಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾಗಿದೆ ಎಂದರು. ಸಿಐಟಿಯು ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ರಾಧಾ, ಮುಖಂಡರಾದ ಶಂಕರ ವಾಲ್ಪಾಡಿ, ಗಿರಿಜಾ,ಲಕ್ಷ್ಮೀ, ಮಹಮ್ಮದ್ ತಸ್ರೀಫ್, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *