Header Ads
Breaking News

ಮೂಡುಬಿದರೆಯ ಎಂಸಿಎಸ್ ಬ್ಯಾಂಕ್‌ನಲ್ಲಿ ಜೇನು ಕೃಷಿ ಕಾರ್ಯಾಗಾರ

ಮೂಡುಬಿದಿರೆ : ಜೇನು ಕೃಷಿಯು ಪರಿಸರ, ಕೃಷಿಗೆ ಪೂರಕವಾದ, ಉತ್ತಮ ಆದಾಯವನ್ನೂ ತಂದುಕೊಡಬಲ್ಲ ಕೃಷಿಯಾಗಿದೆ. ‘ದ.ಕ. ಜಿಲ್ಲೆಯು ಹೈನುಗಾರಿಕೆಯ ಮೂಲಕ ಗುಜರಾತನ್ನೂ ಹಿಂದಿಕ್ಕಿ ರಾಷ್ಟ್ರದಲ್ಲೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೇರಿದೆ. ಅದರಂತೆ ಜೇನು ಕೃಷಿಯಲ್ಲೂ ಕ್ರಾಂತಿಯಾಗುವಂತೆ ಇಲ್ಲಿನ ಕೃಷಿಕರು ಮನಸ್ಸು ಮಾಡಬೇಕಾಗಿದೆ’ ಎಂದು ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಕರೆ ನೀಡಿದರು.

ದ.ಕ. ಜಿ.ಪಂ. ತೋಟಗಾರಿಕಾ ಇಲಾಖೆ, ಮೂಡುಬಿದಿರೆ ಸಹಕಾರಿ ಸೇವಾ ಬ್ಯಾಂಕ್, ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಬ್ಯಾಂಕ್‌ನ ಕಲ್ಪವೃಕ್ಷ ಸಭಾಭವನದಲ್ಲಿ ನಡೆದ ಜೇನು ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅವರು ಮಾತನಾಡಿ, ಜೇನು ಕೃಷಿಗೆ ತೋಟಗಾರಿಕಾ ಇಲಾಖೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದೆ. ಸಣ್ಣ ರೈತರು ತಮ್ಮ ಜಾಗದಲ್ಲಿ ಮಾತ್ರವಲ್ಲ ಬೇರೆಯವರ ಜಾಗದಲ್ಲೂ ಜೇನು ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆ ಮಾಡಿ ಉಪ ಆದಾಯ ಗಳಿಸಬಹುದು’ ಎಂದು ಹೇಳಿದರು.

ಎಂಸಿಎಸ್ ಬ್ಯಾಂಕ್ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಿಗೆ ಜೇನು ಬಾಟಲಿಗಳನ್ನೇ ಸ್ಮರಣಿಕೆಯಾಗಿ ನೀಡಲಾಯಿತು. ಇಲಾಖೆಯ ಅಧಿಕಾರಿಗಳಾದ ಯುಗೇಂದ್ರ, ಜೇನು ತಜ್ಞ ಪ್ರವೀಣ್, ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬಲಂಗಡಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *