Header Ads
Header Ads
Breaking News

ಮೂಡುಬಿದರೆಯ ಪೊಲೀಸ್ ಠಾಣಾ ಆವರಣದಲ್ಲಿ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಶ್ರಮದಾನ

ಮೂಡುಬಿದಿರೆಯ ವಲಯ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಯ ಆವರಣದಲ್ಲಿ ಶ್ರಮದಾನ ನಡೆಯಿತು. ತೋಡಾರಿನ ಧರ್ಮಗುರು ಅಬೂಬಕರ್ ಅಝಾರಿಯಾ ಅವರ ದುವಾದೊಂದಿಗೆ ಶ್ರಮದಾನವನ್ನು ಆರಂಭಿಸಲಾಯಿತು. ಸುಮಾರು ನೂರು ಜನರನ್ನೊಳಗೊಂಡ ತಂಡದ ಸದಸ್ಯರು 3ಗಂಟೆಗಳ ಕಾಲ ಶ್ರಮದಾನ ನಡೆಸಿದ್ದು, ಪೊಲೀಸ್ ಠಾಣೆಯ ಹೊರ ಆವರಣದಲ್ಲಿ ತುಂಬಿಕೊಂಡಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದಲ್ಲದೆ ಹೊಂಡಗಳಾಗಿದ್ದ ಜಾಗಗಳಿಗೆ ಕಲ್ಲು ಹಾಗೂ ಮಣ್ಣುಗಳನ್ನು ತುಂಬಿಸಿ ಸಮತಟ್ಟುಗೊಳಿಸಿದ್ದರು. ಆವರಣದೊಳಗಡೆ ಮಳೆಗಾಲದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲಾಯಿತು. ಈ ತಂಡದೊಂದಿಗೆ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ಮತ್ತು ಸಿಬಂದಿಗಳು ಕೂಡಾ ಶ್ರಮದಾನದಲ್ಲಿ ಕೈಜೋಡಿಸಿದರು.

Related posts

Leave a Reply

Your email address will not be published. Required fields are marked *