Header Ads
Header Ads
Breaking News

ಮೂಡುಬಿದರೆಯ ಬಳ್ಳಾಲಬೈಲು ಎಂಬಲ್ಲಿ ನೀರಿನ ಡ್ರಮ್‌ನೊಳಗೆ ಸತ್ತ ಮಂಗನ ಮರಿ ಪತ್ತೆ

ಮಂಗನ ಮರಿಯೊಂದು ನೀರಿನ ಡ್ರಂನೊಳಗೆ ಬಿದ್ದು ಮೃತಪಟ್ಟ ಘಟನೆ ಮೂಡುಬಿದರೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರುಡೆ ಬಳ್ಳಾಲಬೈಲು ಪರಿಸರದಲ್ಲಿ ನಡೆದಿದೆ. ಮಂಗನ ಶವ ಕೊಳೆತು ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಡುತ್ತಿದ್ದ ವೇಳೆ ನೀರಿನ ಡ್ರಮ್‌ನಲ್ಲಿ ಶವ ಪತ್ತೆಯಾಗಿದೆ.

ಬಳ್ಳಾಲಬಲ್‌ನ ಕೃಷ್ಣ ಪ್ಪ ಶೆಟ್ಟಿಗಾರ್ ಕಾರಣಾಂತರಗಳಿಂದ ಒಂಟಿಯಾಗಿ ಜೀವಿಸುತ್ತಿದ್ದ ಸುಮಾರು ೧೦ ದಿನಗಳ ಹಿಂದೆ ನಿಧನ ಹೊಂದಿದ್ದರು. ಅವರ ನಿಧನ ಬಳಿಕ ಯಾರೂ ಮನೆಯಲ್ಲಿ ವಾಸವಿರದ ಕಾರಣ, ನೀರು ತುಂಬಿದ ಡ್ರಂನೊಳಗೆ ಕೋತಿ ಮರಿಯೊಂದು ಬಿದ್ದು ಸತ್ತದ್ದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಆದರೆ ಶವ ಕೊಳೆತು ದುರ್ವಾಸನೆ ಹಬ್ಬತೊಡಗಿದ ಪರಿಣಾಮವಾಗಿ ಊರಿನವರು ಹುಡುಕಾಡುವಾಗ ಈ ಕೋತಿ ಮರಿಯ ಶವ ಬುಧವಾರ ಗೋಚರಿಸಿದೆ.

ಅರಣ್ಯ ಇಲಾಖಾ ಅಧಿಕಾರಿ ಕೆ.ಸಿ. ಮ್ಯಾಥ್ಯೂ, ತಾಲೂಕು ಆರೋಗ್ಯ ಅಧಿಕಾರಿ ನವೀನ್ ಕುಲಾಲ್ ಉಪಸ್ಥಿತಿಯಲ್ಲಿ ಶವ ಮಹಜರು ನಡೆಯಿತು.

ಮಂಗನ ಖಾಯಿಲೆ ದೃಢಪಟ್ಟಿಲ್ಲ:ಈ ಭಾಗದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಶವದ ಸನಿಹ ಮಂಗನ ಖಾಯಿಲೆಯಲ್ಲಿ ಕಾಣಿಸುವ ಹೇನಿನಂಥ ಜೀವಿಗಳು ಕಂಡುಬಂದಿಲ್ಲದ ಕಾರಣ ಇದೊಂದು ಆಕಸ್ಮಿಕ ಸಾವು ಎಂದು ತಾಲೂಕು ಆರೋಗ್ಯಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

Related posts

Leave a Reply