Header Ads
Header Ads
Breaking News

ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ. ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಪುರಸಭೆಯಿಂದ ಕಡಿವಾಣದ ಕ್ರಮ. ಪುರಸಭೆಯ ದ್ವಂದ್ವ ನೀತಿಗೆ ತರಕಾರಿ ವ್ಯಾಪಾರಸ್ಥರಿಂದ ತರಾಟೆ.

ಮೂಡಬಿದಿರೆ : ನಿಷೇಧಿತ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ಒಯ್ಯುತ್ತಿದ್ದ ಗ್ರಾಹಕರಿಗೆ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ತರಕಾರಿಗಳನ್ನು ನೀಡುತ್ತಿದ್ದ ವ್ಯಾಪಾರಸ್ಥರ ವಿರುದ್ಧ ಪುರಸಭಾಧಿಕಾರಿಗಳು ದಂಡ ಹಾಕಿದ್ದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ವ್ಯಾಪಾರಸ್ಥರು ಮೀನು ಮಾರಾಟಗಾರರು ನಿಷೇಧಿತ ಪ್ಲಾಸಿಕ್ ಚೀಲದಲ್ಲಿ ಹಾಕಿ ನೀಡುತ್ತಿದ್ದು ಈ ಬಗ್ಗೆ ಮೊದಲು ಕ್ರಮಕೈಗೊಳ್ಳಿ ಎಂದು ವಾರದ ಸಂತೆಯಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.ಪುರಸಭಾ ಮಾರುಕಟ್ಟೆ ಸಹಿತ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಚೀಲ ಬಳಕೆ ನಿಷೇಧದ ಬಗ್ಗೆ ಕಳೆದ ಮೂರು ನಾಲ್ಕು ವಾರಗಳಿಂದ ಮಾರ್ಕೆಟ್‌ನ ವ್ಯಾಪಾರಸ್ಥರಿಗೆ ಮತ್ತು ಜನರಿಗೆ ಪುರಸಭಾಧಿಕಾರಿಗಳು ಜಾಗೃತಿಯನ್ನು ಮೂಡಿಸುತ್ತಾ ಬಂದಿದ್ದು ಆ.೧೫ರಿಂದ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಿದ್ದರು. ಈ ಶುಕ್ರವಾರದಂದು ಪರಿಸರ ಅಭಿಯಂತರೆ ಶಿಲ್ಪಾ ಎಸ್. ಹಾಗೂ ಸಿಬಂದಿಗಳು ಪ್ಲಾಸ್ಟಿಕ್ ಚೀಲ ಬಳಕೆ ಮತ್ತು ಮಾರಾಟದ ಪ್ರಕರಣಗಳನ್ನು ಪತ್ತೆ ಹಚ್ಚಿ ಎಚ್ಚರಿಸಲು ತೆರಳಿದ್ದರು. ಬೆಳಗಿನ ವೇಳೆ ಪರಿಶೀಲನೆ ನಡೆಸಿದಾಗ ಹೆಚ್ಚಿನವರು ಬಟ್ಟೆ ಚೀಲ ಬಳಕೆ ಮಾಡುತ್ತಿರುವುದು ಕಂಡಿದೆ. ಆದರೆ ಮಧ್ಯಾಹ್ನದ ವೇಳೆಗೆ ಪರಿಶೀಲಿಸುವಾಗ ಕೆಲವರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಕೆಲವರು ಚೀಲಗಳನ್ನು ಬಳಸುತ್ತಿದ್ದುದು ಕಂಡು ಬಂದಿತು.ಸಂಜೆಯ ವೇಳೆಗೆ ಮತ್ತೆ ಪುರಸಭಾ ಟೀಂ ಬಂದು ಪರಿಶೀಲನೆ ನಡೆಸುತ್ತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಿಡಿದುಕೊಂಡಿದ್ದ ಬಳಕೆದಾರರಿಗೆ, ಸಾಮಗ್ರಿ ತುಂಬಿಸಿ ಕೊಡುತ್ತಿದ್ದ ವ್ಯಾಪಾರಿಗಳಿಗೆ ಸಾಂಕೇತಿಕ ದಂಡ ವಿಧಿಸತೊಡಗಿದಾಗ ಪರಿಸ್ಥಿತಿ ಕೊಂಚ ಗರಂ ಆಗತೊಡಗಿತು. ಬೆಳಗ್ಗೆ ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದ ವ್ಯಾಪಾರಿ ಗಳು ಹಗಲು ವ್ಯಾಪಾರ ಜೋರಾಗಿ ನಡೆಯುತ್ತಿದ್ದಂತೆ ಮತ್ತೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿ ಕಟ್ಟಿ ಕೊಡತೊಡಗಿದ್ದನ್ನು ಶಿಲ್ಪಾ ಪ್ರಶ್ನಿಸಿ, ದಂಡ ವಿಽಸಲು ಮುಂದಾದರು. ಆಗ ಆ ವ್ಯಾಪಾರಿ ಕೊಂಚ ಚರ್ಚೆಗಿಳಿದಂತೆ ಉಳಿದ ತರಕಾರಿ ವ್ಯಾಪಾರಿಗಳೂ ಅಲ್ಲಿ ಜಮಾಯಿಸಿ ವ್ಯಾಪಾರಿ ಪರ ಮಾತನಾಡತೊಡಗಿದರು. ಆಗ ತರಕಾರಿ ವ್ಯಾಪಾರಸ್ಥರು ‘ಮೀನು, ಮಾಂಸ ಮಾರುವವರು ಪ್ಲಾಸ್ಟಿಕ್ ಚೀಲ ಬಳಸಬಹುದಾದರೆ ನಾವೇಕೆ ಬಳಸಬಾರದು?. ಕಾನೂನು ಅವರಿಗೊಂದು ನಮಗೊಂದಾ? ನಾವೂ ಬದುಕಬೇಡವಾ?’ ಎಂಬ ಮಾತು ಕೇಳಿಬಂದಿತು. ಆಗ ಶಿಲ್ಪಾ ಅವರು,‘ ನೋಡಿ, ಇದು ಕೌನ್ಸಿಲ್ ನಿರ್ಣಯ, ನಾವು ಆ ನಿರ್ಣಯವನ್ನು ಜಾರಿ ಮಾಡಲು ಬಂದವರಷ್ಟೇ’ ಎಂದು ಸ್ಪಷ್ಟಪಡಿಸಿದರು. ಮಹಿಳಾ ಮತ್ತು ಪುರುಷ ಪೊಲೀಸರಿದ್ದರೂ ಚರ್ಚೆ, ವಾಕ್ಸಮರ ಜೋರಾಗಿ ನಡೆದು ಕೊನೆಗೆ ಸ್ವತ: ಪಿಎಸ್‌ಐ ದೇಜಪ್ಪ ಅವರೇ ಸ್ಥಳಕ್ಕೆ ಬರಬೇಕಾಯಿತು. ‘ಬಂದ್ ಮಾಡುವುದಾದರೆ ಪ್ಲಾಸ್ಟಿಕ್ ಫ್ಯಾಕ್ಟರಿ ಬಂದ್ ಮಾಡಿಸಿ, ಆಗ ನಾವೂ ಎಡ್ಜಸ್ಟ್ ಆಗುತ್ತೇವೆ, ಸುಮ್ಮನೆ ಇದೆಲ್ಲ ಆಗುವ ಹೋಗುವ ವಿಚಾರವಾ? ಲೇಸ್, ಕುರ್ಕುರೆ, ಚಾಕಲೇಟ್ ರ್‍ಯಾಪರ್ ಎಲ್ಲ ಬಂದ್ ಮಾಡಲಿ ಸರಕಾರ’ ಎಂಬ ಮಾತಿನ ವರಸೆಯೂ ಕೇಳಿಬಂದಿತು. ಈ ನಡುವೆ ಅಲ್ಲಿದ್ದ ಕೆಲವು ನಾಗರಿಕರು ‘ಏನೋ ಹೊಸ ಹೆಜ್ಜೆ ಇಟ್ಟಿದೆ , ಪುರಸಭೆ. ನಾವು ಸಾಧ್ಯವಾದಷ್ಟೂ ಸಹಕರಿಸಬೇಕು’ ಎಂದು ಮೆಲ್ಲಗಿನ ದನಿಯಲ್ಲಿ ಪ್ಲಾಸ್ಟಿಕ್ ವಿರೋಧಿ ಆಂದೋಲನದ ಪರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ನಾವು 50 ಮೈಕ್ರೋನ್‌ಗಿಂತ ಮೇಲ್ಪಟ್ಟ ಪ್ಲಾಸ್ಟಿಕ್ ಚೀಲ ಬಳಸಿ ಎಂದು ಸೂಚಿಸಿದ್ದೇವೆ. ಆದರೆ, ವ್ಯಾಪಾರಿಗಳು ೫೦ ಮೈಕ್ರೋನ್‌ಮೇಲ್ಪಟ್ಟ ಪ್ಲಾಸ್ಟಿಕ್ ಚೀಲವನ್ನು ಬಳಸಲೂ ಕಷ್ಟ, ಗ್ರಾಹಕರೂ ಒಪ್ಪುತ್ತಿಲ್ಲ ಎಂದು ಶಿಲ್ಪಾ ತಿಳಿಸಿದರು.

Related posts

Leave a Reply