
ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಗತಿ ಮಹಾಸಂಘ ಮೂಡುಬಿದಿರೆ ಹಾಗೂ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ರಿ) ಮಂಗಳೂರು ಇವುಗಳ ವತಿಯಿಂದ ಮಹಿಳಾ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮವು ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್ನ ಸಭಾಂಗಣದಲ್ಲಿ ನಡೆಯಿತು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಸ್ಪೂರ್ತಿಯ ಚಿಲುಮೆಯೇ ಮಹಿಳೆ. ನಾವು ಹಿಂದಿನಿಂದಲೂ ನಾರಿಯರಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದೇವೆ ಎಂದ್ರ. ಈ ವೇಳೆ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ನಿವೃತ್ತ ಪಾಂಶುಪಾಲ, ಧರ್ಮಗುರು ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.