Header Ads
Header Ads
Breaking News

ಮೂಡುಬಿದರೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ ನಿಷೇಧ. ಆಸುಪಾಸಿನ ಗ್ರಾ.ಪಂಗಳಲ್ಲಿ ಜಾಗೃತಿ, ಫ್ಲೆಕ್ಸ್‌ಗಳಿಗೆ ದಂಡ. ಮೂಡುಬಿದಿರೆ ಪುರಸಭಾಧಿವೇಶನದಲ್ಲಿ ನಿರ್ಧಾರ.

ಮೂಡುಬಿದಿರೆ : ಅಧಿಕಾರಿಗಳು ಪುರಸಭಾ ವ್ಯಾಪ್ತಿಯಲ್ಲಿ ಮಾತ್ರ ಪ್ಲಾಸ್ಟಿಕನ್ನು ನಿಷೇಧ ಮಾಡಿದರೆ ಸಾಲದು. ಆಸುಪಾಸಿನ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿರುವುದರಿಂದ ಅಲ್ಲಿನ ಪ್ಲಾಸ್ಟಿಕ್, ತ್ಯಾಜ್ಯಗಳು ನಗರದೊಳಗೆ ಬರುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಅಧಿಕಾರಿಗಳನ್ನು ಕರೆಸಿ ಜಾಗೃತಿ ಮೂಡಿಸಬೇಕಾಗಿದೆ.ಅವರು ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಗೊಳಿಸುವ ಬಗ್ಗೆ ಮಾತನಾಡಿದರು. ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿದವರಿಗೆ ದಂಡ ವಿಽಸುವ ಬಗ್ಗೆ ಪರಿಸರ ಅಭಿಯಂತರೆ ಶಿಲ್ಪಾ ಎಸ್ ವಿವರಣೆ ನೀಡಿದರು. ದಂಡ ವಿಧಿಸಿದರೂ ಪಾವತಿ ಮಾಡದಿದ್ದರೆ ಕ್ರಿಮಿನಲ್ ಮೊಕದ್ದಮೆಗೆ ಅವಕಾಶವಿದೆ ಎಂದು ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ ಹೇಳಿದರು. ಈ ನಡುವೆ ಸಿಪಿಎಂನ ರಮಣಿ, ದಂಡ ಕಟ್ಟಿದ ಮೇಲೆ ಫ್ಲೆಕ್ಸ್ ತೆಗಿಸಲಿಕ್ಕೆ ಆಗ್ತದಾ ಎಂಬ ಪ್ರಶ್ನೆ ಎತ್ತಿ ಮತ್ತಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಕೊನೆಗೆ ಈಗ ಇರುವ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಹಾಕುವವರಿಗೆ ದಂಡ ವಿಧಿಸಲು ನಿರ್ಧರಿಸಲಾಯಿತು.ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಸದಸ್ಯರು ಮುಖ್ಯಾಧಿಕಾರಿ ಶೀನ ನಾಯ್ಕ್, ಇಂಜಿನಿಯರ್ ದಿನೇಶ್, ಮುರಳೀಧರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply