Header Ads
Header Ads
Breaking News

ಮೂಡುಬಿದಿರೆ:‘ಚಾಂಪಿಯನ್ ಆಫ್ ದಿ ಚಾಂಪಿಯನ್ 2019’ ದೇಹದಾರ್ಢ್ಯ ಸ್ಪರ್ಧೆ

ಮೂಡುಬಿದಿರೆ: ಜಿಲ್ಲಾ ಮಟ್ಟದ ’ಮೂಡುಬಿದಿರೆ ಶ್ರೀ-2019’, ಅನಿಲ್ ಕ್ಲಾಸಿಕ್ 2019 ’ಹಾಗೂ ‘ಚಾಂಪಿಯನ್ ಆಫ್ ದಿ ಚಾಂಪಿಯನ್ 2019’ ದೇಹದಾರ್ಢ್ಯ ಸ್ಪರ್ಧೆಗಳು ಮೆಂಡೋನ್ಸಾ ಡೆವಲಪರ್‍ಸ್ ಗಂಟಾಲ್ ಕಟ್ಟೆ ಹಾಗೂ ಸೌತ್ ಕೆನರಾ ಅಮೆಚೂರ್ ಬಾಡಿ ಬಿಲ್ಡರ್‍ಸ್ ಅಸೋಸಿಯೇಶನ್ ವತಿಯಿಂದ ಜನವರಿ 13ರಂದು ನಡೆಯಲಿವೆ ಎಂದು ದೇಹದಾರ್ಢ್ಯ ಪಟು ಅನಿಲ್ ಮೆಂಡೋನ್ಸಾ ತಿಳಿಸಿದ್ದಾರೆ. 

ಅವರು ಮೂಡಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಟೈಟಲ್‌ನಲ್ಲು ವಿವಿಧ ವಿಭಾಗಗಳಿರುತ್ತದೆ. ಮೂರು ವಿಭಾಗಗಳಲ್ಲಿ ಸುಮಾರು 10 ಸ್ಪರ್ಧಿಗಳು ಭಾಗವಹಿಸಲಿದ್ದು ಅನಿಲ್ ಕ್ಲಾಸಿಕ್ ಸ್ಪರ್ಧೆಯ ವಿಜೇತರಿಗೆ ರೂ 15ಸಾವಿರ ನಗದು ಹಾಗೂ ಟ್ರೋಫಿ, ’ಮೂಡುಬಿದಿರೆ ಶ್ರೀ’ ಸ್ಪರ್ಧೆಯ ವಿಜೇತರಿಗೆ ರೂ 10ಸಾವಿರ ನಗದು ಹಾಗೂ ಟ್ರೋಫಿ ಮತ್ತು ’ಚಾಂಪಿಯನ್ ಆಫ್ ದಿ ಚಾಂಪಿಯನ್’ ಸ್ಪರ್ಧೆಯ ವಿಜೇತರಿಗೆ ರೂ 15 ಸಾವಿರ ನಗದು ಮತ್ತು ಟ್ರೋಫಿಯನ್ನು ಘೋಷಿಸಲಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಿಸ್ಟರ್ ವಲ್ಡ್ ವಿಜೇತ ರೇಮಂಡ್ ಡಿ‘ಸೋಜಾ, ಏಕಲವ್ಯ ಪ್ರಶಸ್ತಿ ವಿಜೇತ ಶೋಧನ್ ರೈ, ರೋಶನ್ ಫೆರಾವೊ, ಭಾಸ್ಕರ್ ತೊಕ್ಕೊಟ್ಟು, ಸೀತಾರಾಮ್ ಕುಲಾಲ್ ಅವರನ್ನು ಸನ್ಮಾನಿಸಲಾಗುವುದು. ಇದೇ 13ರಂದು ಸಂಜೆ ಗಂಟೆ ೫ಕ್ಕೆ ಪದ್ಮಾವತಿ ಕಲಾ ಮಂದಿರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸ್ಪರ್ಧೆಯನ್ನು ಉದ್ಘಾಟಿಸುವರು.
ಕ್ಯಾನ್ಸರ್ ಪೀಡಿತ ಮತ್ತು ಆಶ್ರಮವಾಸಿಗಳ ಮಕ್ಕಳ ಸಹಾಯಾರ್ಥವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅನಿಲ್ ಮೆಂಡೋನ್ಸಾ ತಿಳಿಸಿದರು. ವ್ಯಾಯಾಮ ಶಾಲೆಯ ತರಬೇತುದಾರರಾದ ನಾರಾಯಣ ಪಡುಮಲೆ ಮತ್ತು ಸೀತಾರಾಮ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply