Header Ads
Header Ads
Breaking News

ಮೂಡುಬಿದಿರೆಯಲ್ಲಿ ಕೆಂಬಾವುಟದ 9ನೇ ರಾಜ್ಯ ಸಮ್ಮೇಳನ ಕಾರ್ಮಿಕರಿಗೆ ಏಕರೂಪದ ಮಜೂರಿ ಜಾರಿ ಸವಲತ್ತುಗಳ ಅನುಷ್ಠಾನವಾಗಬೇಕು ದೇಬಾಶೀಸ್

 

ಮೂಡುಬಿದಿರೆ: ಕರ್ನಾಟಕ ರಾಜ್ಯ ಬೀಡಿ ಕಾಮಿಕರ ಫೆಡರೇಶನ್ (ಸಿ‌ಐಟಿಯು) ವತಿಯಿಂದ ಸಮಾಜ ಮಂದಿರ ಸಭಾದ ಸ್ವರ್ಣಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯುವ ೯ನೇ ರಾಜ್ಯ ಸಮ್ಮೇಳನವನ್ನು ಸಿ‌ಐಟಿಯು ರಾಷ್ಟ್ರೀಯ ಪ್ರಧಾನ ಕಾರ್‍ಯದರ್ಶಿ ದೇಬಾಶೀಸ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಬೀಡಿ ಕಾರ್ಮಿಕರ ಸಂಘಟನೆ ಇಲ್ಲದ ರಾಜ್ಯಗಳಿಗೆ ಅಥವಾ ಬಡತನವಿರುವ ಊರುಗಳಿಗೆ ಬೀಡಿ ಮಾಲಿಕರು ವಲಸೆ ಹೋಗುತ್ತಿರುವುದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಲು ದೇಶದಲ್ಲಿ ಏಕರೂಪದ ಬೀಡಿ ಮಜೂರಿ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು.


ಸಿ‌ಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕರ್ನಾಟಕದಲ್ಲಿ ಬೀಡಿ ಕಾರ್ಮಿಕರು ಸಂಕಷ್ಟದಲ್ಲಿದ್ದು ಸರಕಾರ ಇವರಿಗೆ ಪರ್‍ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಸಿ‌ಐಟಿಯುನ ಪ್ರಮುಖರಾದ ಸೈಯ್ಯದ್ ಮುಜೀದ್, ವಸಂತ ಅಚಾರಿ, ಸುನಿಲ್ ಕುಮಾರ್ ಬಜಾಲ್, ರಮಣಿ, ರಾಧ, ಗಿರಿಜ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply