Header Ads
Header Ads
Header Ads
Breaking News

ಮೂಡುಬಿದಿರೆಯಲ್ಲಿ ಕೆಂಬಾವುಟ ಜಾಥಾ ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಜ.2ರಿಂದ5 ರ ವರೆಗೆ ಮೂಡುಬಿದಿರೆಯಲ್ಲಿ ನಡೆಯುವ ಸಿಪಿ‌ಐ‌ಎಂ ಪಕ್ಷದ 22 ನೇ ರಾಜ್ಯ ಸಮ್ಮೇಳನಕ್ಕೆ ಪೂರಕವಾಗಿ ಭಾನುವಾರ ವಿವಿಧ ವಾಹನಗಳಲ್ಲಿ ಕೆಂಬಾವುಟ ಜಾಥಾ ನಡೆಯಿತು.
ಸ್ವಾಗತ ಸಮಿತಿಯ ಕಾರ್‍ಯದರ್ಶಿ ಯಾದವ ಶೆಟ್ಟಿ ಜಾಥಾವನ್ನುದ್ದೇಶಿಸಿ ಮಾತನಾಡಿ ಕಾರ್ಮಿಕ, ದಲಿತ ಮತ್ತು ಶೋಷಿತರ ಪರವಾಗಿ ಸದಾ ಬೆನ್ನೆಲುಬಾಗಿ ನಿಂತಿರುವ ಪಕ್ಷವಿದ್ದರೆ ಅದು ಸಿಪಿ‌ಐ(ಎಂ) ಪಕ್ಷವಾಗಿದೆ. ಶಿಸ್ತು, ನ್ಯಾಯಬದ್ಧ ಹಾಗೂ ಹಗರಣವಿಲ್ಲದ ಪಕ್ಷವೆಂದು ಗುರುತಿಸಿಕೊಂಡಿದೆ ಎಂದು ಹೇಳಿದ ಅವರು ಜ.2ರಿಂದ ಮೂಡುಬಿದಿರೆಯಲ್ಲಿ ನಡೆಯುವ 22 ನೇ ಸಿಪಿ‌ಐ‌ಎಂ ಸಮ್ಮೇಳನಕ್ಕೆ ಪಕ್ಷದ ಪ್ರಧಾನ ಕಾರ್‍ಯದರ್ಶಿ ಸೀತಾರಾಮ ಯೆಚೂರಿ, ಪಕ್ಷದ ರಾಜ್ಯ ಸಮಿತಿಯ ಕಾರ್‍ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ, ಹಾಗೂ ಸಿ‌ಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಮತ್ತಿತರರು ಮಾತನಾಡಲಿದ್ದಾರೆ ಎಂದರು.

ಸಿಪಿ‌ಐ‌ಎಂ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ಎಂಪ್ಲಾಯ್ ಫಡರೇಷನ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಬಿ.ಎಂ ಮಾಧವ, ಡಿವೈ‌ಎಫ್‌ಐನ ಜಿಲ್ಲಾ ಪ್ರ.ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್, ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಸಿಪಿ‌ಐ‌ಎಂ ಮುಖಂಡರಾದ ರಮಣಿ, ಕೃಷ್ಣಪ್ಪ ಕೊಂಚಾಡಿ, ರಾಧಾ, ಗಿರಿಜ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply