Header Ads
Header Ads
Header Ads
Breaking News

ಮೂಡುಬಿದಿರೆಯಲ್ಲಿ ಕೆಥೋಲಿಕ್ ಸಭಾ ರಜತೋತ್ಸವ ಕೆಥೋಲಿಕ್ ಸಮಾಜೋತ್ಸವ, ಸಾಧಕರಿಗೆ ಸಮ್ಮಾನ ಜ.28 ರಂದು ನಡೆಯಲಿರುವ ಕಾರ್ಯಕ್ರಮ

ಮೂಡುಬಿದಿರೆಯ ಕೆಥೋಲಿಕ್ ಸಭಾ ಮೂಡುಬಿದಿರೆ ವಲಯ ಸಮಿತಿಯ ದಶಮಾನೋತ್ಸವದ ಅಂಗವಾಗಿ ಜನವರಿ 28 ರಂದು ಆಲಂಗಾರ್ ಚರ್ಚ್ ವಠಾರದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜಾ ಅಧ್ಯಕ್ಷತೆಯಲ್ಲಿ ಕೆಥೋಲಿಕ್ ಸಮಾಜೋತ್ಸವ, ಸಾಧಕರಿಗೆ ಸಮ್ಮಾನ ನಡೆಯಲಿದೆ ಎಂದು ಬೆಳ್ಳಿ ಹಬ್ಬ ಸಂಚಾಲಕ ಜೆರಾಲ್ಡ್ ಡಿ ಕೋಸ್ತಾ ತಿಳಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಸದ್ಭಾವನೆ, ಶಾಂತಿ, ಸಾಮರಸ್ಯದ ಉದ್ದೇಶದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಸದ ಆಸ್ಕರ್ ಫೆರ್ನಾಂಡಿಸ್, ಶಾಸಕ ಕೆ. ಅಭಯಚಂದ್ರ, ಜೆ. ಆರ್. ಲೋಬೋ, ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ,ಕೆಥೋಲಿಕ್ ಸಭಾ ಮಂಗಳೂರು ಅಧ್ಯಕ್ಷ ಅನಿಲ್ ಲೋಬೋ, ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಮ್ಯಾಥ್ಯೂ ವಾಸ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಪುತ್ತಿಗೆ ಜಿ.ಪಂ. ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಉಡುಪಿ ಪ್ರದೇಶ ಕೆಥೋಲಿಕ್ ಸಭಾ ಅಧ್ಯಕ್ಷ ವೆಲೇರಿಯನ್ ಫೆರ್ನಾಂಡೀಸ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯದ ಕ್ರೈಸ್ತ ಉದ್ಯಮಿಗಳ ಸಂಘಟನೆ, ಕೃಷಿಕರ ವೇದಿಕೆಗೆ ಚಾಲನೆ ನೀಡಲಾಗುತ್ತದೆ. ಜನವರಿ 26 ರಂದು ಸಂಜೆ ೩.೩೦ರಿಂದ ಸ್ವರಾಜ್ಯ ಮೈದಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದ ಅವರು ಕೆಥೋಲಿಕ್ ಸಭಾ ಕಳೆದ ೨೫ ವರ್ಷಗಳಲ್ಲಿ ಕ್ರೈಸ್ತ ಯುವಕರಿಗೆ ಕೃಷಿ, ಉದ್ಯಮದಲ್ಲಿ ತರಬೇತಿ, ದೇಶೀಯ ಸ್ವ ಉದ್ಯಮಿಗಳಾಗಲು ಪ್ರೋತ್ಸಾಹ, ರಾಜಕೀಯ ಸ್ಥಾನ ಮಾನ, ಮತದಾನ ಜಾಗೃತಿ ಮೂಡಿಸುವಲ್ಲಿ ಯಶಸ್ಸು ಕಂಡಿದೆ ಎಂದರು.

ಕೆಥೋಲಿಕ್ ಸಭಾ ಅಧ್ಯಕ್ಷ ಹೆರಾಲ್ಡ್ ರೇಗೋ, ಕಾರ್ಯದರ್ಶಿ ಲಾಯ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಕೋಸ್ತಾ ಉಪಸ್ಥಿತರಿದ್ದರು.

Related posts

Leave a Reply